Pages

Saturday, October 20, 2012

ನೊಂದ ಹೃದಯಗಳಿಗೆ ಸಾಂತ್ವಾನ ಹೇಳುವ ಪುಟ್ಟ ಪ್ರಯತ್ನ


ಲೋಕದಲ್ಲೇ ಕಟ್ಟ ಕಡೆ ಮನುಷ್ಯನ ಪುಟ್ಟ ಹೃದಯವೇ
ನೆನಪನ್ನು ಹೊತ್ತುಕೊಂಡು ನೋವನ್ನು ಭರಿಸಿಕೊಂಡು
ನಡೆ ಮುಂದೆ ನಗುತಲೇ ಎಂದೆಂದೂ
ಬೆರಳು ತೋರಿಸೋ ದಾರಿಯಲ್ಲಿ ಹರಿಯದು ನದಿಯೆಂದೂ
ವಿಧಿ ತೋರಿಸೋ ದಾರಿಯಲ್ಲಿ ನೀ ಓಡು ಎಂದೆಂದೂ
ನಿನ್ನ ನಲುಗುವ ನೆನಪು ನೋರಾದರೂ
ಜೊತೆಗಾತಿಗಾಗಿ ಹುಡುಕಾಡು ನೀನೆಂದೂ
ಕಡಲಲ್ಲಿ ಸೇರೋ ಹನಿಯೇ ವೇದನೆ ಏಕೇ
ಅಲೆಯೊಡನೆ ಸೇರಿ ನಲಿಯೋ ಜೀವ ನೀನು
ಯಾತನೆಯನ್ನು ಭರಿಸೋ ಕಲ್ಲುಗಳೇ
ಸುಂದರ ಶಿಲೆಗಳಾಗುವುದು
ನಿನ್ನ ಕಣ್ಣೀರಿಗೆ ಬೆಲೆಯಿಲ್ಲವಾದರೆ
ನೀ  ಅಳುವುದರಲ್ಲಿ ಅರ್ಥವಿಲ್ಲ
ಕನಸನ್ನು ಹೊತ್ತ ಮನಸೇ ನಿಭಾಯಿಸುವ ಯತ್ನ ಯಾಕೆ
ನಡೆಯಲು ದಾರಿಯಿದೆ ಪ್ರಾರಂಬಿಸು
ಈ ಲೋಕಕ್ಕಿಂತ ದೊಡ್ಡ ಆಕಾಶವೇ ದುಃಖದಲ್ಲಿ ಅಳುವುದು
ನೀ ಅತ್ತುಬಿಡು ನೋವೆಲ್ಲಾ ಮರೆತುಬಿಡು
ಇದು ನಮ್ಮಂತವರಿಗಾಗಿಯೇ ಇರುವ ತಾಣ
ಇಲ್ಲಿ ಜಾಲಾಡು ನೆಮ್ಮದಿಯು ನಿನ್ನದಾಗುವುದು