Sunday, October 21, 2012

ಮದ್ಯದ ದುರ್ವ್ಯಸನ ಅಥವಾ ಅಲ್ಕೊಹಾಲಿಸಮ್

          


 
 
 
ಚಿತ್ರ ಕೃಪೆ master file
ದ್ಯದ ಗೀಳು ಅಥವಾ ಮದ್ಯಪಾನದ ವ್ಯಸನವೆಂದರೆ ಮದ್ಯದ ಮೇಲಿನ ಅವಲಂಬನೆ ,ಇದು ಹವ್ಯಾಸವನ್ನು ಚಟವಾಗಿಸುತ್ತದೆ; ಇದರಿಂದಾಗಿ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಂಡು ಮದ್ಯಪಾನದಿಂದಾಗಿ ತನ್ನ ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಕೊಳ್ಳುತ್ತಾನೆ. ತನ್ನ ಬದುಕಿನ ಮೌಲ್ಯಗಳಿಗೂ ಆತ ಎರವಾಗುತ್ತಾನೆ. ಮಾದಕ ವಸ್ತುಗಳ ದುರಭ್ಯಾಸದಂತೆ ಮದ್ಯದ ಗೀಳು  ಸಹ ಗುಣಪಡಿಸಬಹುದಾದ ಕಾಯಿಲೆಯಾಗಿದೆ.  ಸುಮಾರು 19 ಮತ್ತು 20ನೆಯ ಶತಮಾನದ ಆರಂಭದಲ್ಲಿ ಇದನ್ನು ಮದ್ಯದ ದುರ್ವ್ಯಸನ ಎಂದು ಕರೆಯಲಾಗುತಿತ್ತು. ಈಗ ಆ ಶಬ್ದವನ್ನು ಮದ್ಯದ ಗೀಳು ಅಥವಾ ಅಲ್ಕೊಹಾಲಿಸಮ್   ಆಕ್ರಮಿಸಿದೆ.

ಮದ್ಯದ ಗೀಳು ಹೇಗೆ ಜೀವಶಾಸ್ತ್ರೀಯ ಮಟ್ಟದಲ್ಲಿ ಪಸರಿಸುತ್ತದೆ ಎನ್ನುವುದು ಅನಿಶ್ಚಿತವಾಗಿದೆ. ಆದರೆ ಅದಕ್ಕೆ ಕೆಲವು ಅಂಶಗಳನ್ನು ಗಮನಿಸಬಹುದಾಗಿದೆ. ಸಾಮಾಜಿಕ ಪರಿಸರ, ಒತ್ತಡ, ಮಾನಸಿಕ ಆರೋಗ್ಯ,  ಅನುವಂಶೀಯ ಪ್ರವೃತ್ತಿಯ ಕಾರಣಗಳು, ವಯಸ್ಸು, ಜನಾಂಗೀಯತೆ ಮತ್ತು ಲಿಂಗಭೇದವೂ ಇದಕ್ಕೆ ಕಾರಣವಾಗಬಹುದು. ದೀರ್ಘಕಾಲಿಕ ಮದ್ಯಪಾನವು ದೈಹಿಕ ಮೆದುಳಿನ ಕಾರ್ಯಗಳ ಬದಲಾವಣೆಗಳಿಗೆ ಒಳಪಡುತ್ತದೆ. ಉದಾಹರಣೆಗೆ  ಅಸಹನೆ, ದೈಹಿಕ ಮತ್ತು ಆರ್ಥಿಕ ಅವಲಂಬನೆ,ಹಾಗು ಮಾನಸಿಕ ವಿಕಲಾಂಗತೆ   ಇಂಥಹ  ಮದ್ಯಪಾನದಿಂದಾಗುವ ಲಕ್ಷಣಗಳನ್ನು ತೋರಿಸಿ ಕುಡಿತವನ್ನು ಬಿಡಿಸುವ ಮಟ್ಟಕ್ಕೂ ಹೋಗಬಹುದು.  ಕೆಲವೊಮ್ಮೆ ದೈಹಿಕ ಮೆದುಳಿನಲ್ಲಿನ ರಾಸಾಯನಿಕ ಬದಲಾವಣೆಗಳಿಂದಾಗಿ ಕುಡಿತ ಬಿಡಲಾಗದಷ್ಟು ಅಸಮರ್ಥರಾಗಬಹುದು. ಮದ್ಯಪಾನವು ದೇಹದ ಪ್ರತಿಯೊಂದು ಅಂಗಕ್ಕೂ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ಇದರಲ್ಲಿನ ವಿಷಕಾರಿ ಅಂಶಗಳು ನರಮಂಡಲದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಮದ್ಯದ ಗೀಳು ಸಾಮಾಜಿಕವಾಗಿ ಬದುಕಿನಲ್ಲಿ ತಮ್ಮ ಸುತ್ತಲಿನ ಜನರ ಮಧ್ಯೆ ದುಷ್ಪರಿಣಾಮಕ್ಕೆ ದಾರಿ ಮಾಡಿಕೊಡುತ್ತದೆ.

ಮದ್ಯದ ಗೀಳು ಕುಡುಕರನ್ನು ಅಸಹನೆಯವರೆಗೆ ಹಚ್ಚುವದರ ಜೊತೆಗೆ ಕುಡಿತವನ್ನು ಬಿಡಲಾಗದಷ್ಟು ದುರ್ಬಲಗೊಳಿಸುವ ಸಾಧ್ಯತೆ ಇದೆ. ಇದರಿಂದಾಗಿ ಮದ್ಯವ್ಯಸನಿಯು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡು ಕುಡುಕ ಎನಿಸಿಕೊಳ್ಳುತ್ತಾನೆ. ಮದ್ಯವ್ಯಸನಿಗಳ ವಿವಿಧ ಪ್ರಕಾರಗಳನ್ನು ಪತ್ತೆ ಮಾಡಲು ಪ್ರಶ್ನಾವಳಿಯ ಪರೀಕ್ಷೆಯೊಂದು ಚಾಲ್ತಿಯಲ್ಲಿದೆ, ಇಲ್ಲಿ ಮದ್ಯದ ಗೀಳು ಇರುವವರನ್ನು ಸಹ ಈ ಪಟ್ಟಿಗೆ ಸೇರಿಸಲಾಗುತ್ತದೆ. ಮದ್ಯದಲ್ಲಿರುವ ಮತ್ತಿನ ಅವಲಂಬನೆಯನ್ನು ವ್ಯಸನಿಯ ಮನಸ್ಸಿನಿಂದ  ತೆಗೆದು ಹಾಕುವ ಮೂಲಕ ವ್ಯಸನಿಗಳ ಮದ್ಯದ ಗೀಳನ್ನು ಬಿಡಿಸಬಹುದಾಗಿದೆ, ಇದಕ್ಕೆ ಪೂರಕವಾಗಿ ಮಾದಕ ವ್ಯಸನಿಗಳ ಔಷಧಿಯ ಬಳಕೆಯನ್ನು ಇಲ್ಲಿ ಮಾಡಬಹುದಾಗಿದೆ . ಹಾಗೂ  ಕುಡಿತದ ಚಟಕ್ಕೆ ಅಂಟಿಕೊಳ್ಳುವುದನ್ನು ಕಡಿಮೆ ಮಾಡುವ ವಿಧಾನಗಳನ್ನು ಅನುಸರಿಸಬೇಕಾಗಿದೆ.  ವೈದ್ಯಕೀಯ ಔಷಧೋಪಚಾರದ ನಂತರದ ಕಾಳಜಿ, ಬಹಳ ಮುಖ್ಯ ಅದನ್ನು  ಸಮೂಹ ಚಿಕಿತ್ಸೆ ಅಥವಾ ಸ್ವಸಹಾಯ ಗುಂಪುಗಳು ಇತ್ಯಾದಿ ಇದರ ಬಗ್ಗೆ ಕುಲಂಕುಷವಾಗಿ ಗಮನಿಸಿ ಸರಳ ಉಪಾಯಗಳನ್ನು ಅನುಸರಿಸುತ್ತವೆ.  ಮದ್ಯವ್ಯಸನಿಗಳು ಸಾಮಾನ್ಯವಾಗಿ ಬೇರೆ ಮಾದಕ ವಸ್ತುಗಳನ್ನು ಸೇವಿಸಲು ಸಹ ಆರಂಭಿಸಬಹುದಾಗಿದೆ. ಉದಾಹರಣೆಗಾಗಿ ಬೆಂಜೊಡೈಜೆಪೈನ್ಸ್ ಅಂದರೆ ನರನಾಡಿಗಳನ್ನು ಸಡಿಲುಗೊಳಿಸುವ ಮತ್ತು ಅದು ಚಟವಾಗಿ ಮಾರ್ಪಡುವ ಅವಕಾಶವೂ ಇದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆ ಹಾಗು ಔಷಧೋಪಚಾರದ ಅಗತ್ಯವಿದೆ.  ಮಹಿಳೆ ಕೂಡಾ ಮದ್ಯ ವ್ಯಸನದ ಪಾತಾಳಕ್ಕೆ ಬಿದ್ದರೆ ಅವಳ ಅಂದರೆ ಹೆಣ್ಣಿಗಿರುವ ಸೂಕ್ಷ್ಮತೆ ಭೌತಿಕವಾಗಿ ಮತ್ತು ಮಾನಸಿಕ ಹಾಗು ಮೆದುಳಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಸಾಮಾಜಿಕವಾಗಿ ಕುಡುಕ ವ್ಯಕ್ತಿಯೊಂದಿಗಿನ ಸಹಸವಾಸವೂ ಒಂದು ಕಳಂಕವಾಗಿ ಮಾರ್ಪಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವಾದ್ಯಾಂತ ಸುಮಾರು 140  ದಶಲಕ್ಷ ಮದ್ಯದ ಗೀಳು ಇರುವವರು  ಇದ್ದಾರೆ.

ಮದ್ಯದ ಗೀಳು ಮತ್ತು ಮಾದಕ ದೃವ್ಯಗಳ ಅವಲಂಬಿತರ ಕುರಿತ ರಾಷ್ಟ್ರೀಯ ಸಮಿತಿ ಹಾಗು ಅಮೆರಿಕನ್ ಸೊಸೈಟಿ ಆಫ್ ಅಡಿಕ್ಷನ್ ಮೆಡಿಸಿನ್  ಇವುಗಳ ಪ್ರಕಾರ ಮದ್ಯದ ಗೀಳು ಅಥವಾ ದುರಭ್ಯಾಸವು "ಮೂಲಭೂತವಾಗಿ ಕುಡಿತ ನಿಯಂತ್ರಣ ಮಾಡಲಾಗದ ಸುದೀರ್ಘ ಕಾಲದ ಪ್ರಾಥಮಿಕ ಕಾಯಿಲೆ ಎನ್ನಬಹುದು, ಇದರ ಜೊತೆಗೆ ಇತರ ಮತ್ತಿನ ಔಷಧಿಗಳು ಮತ್ತು ಕುಡಿತದ ವ್ಯಸನವು ವಿಚಾರ ಲಹರಿಯನ್ನು ಕೆಡಿಸಿ ಹಲವಾರು ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ."   ದಿ ಡೊಮಿನಂಟ್ ಡೈಗ್ನೊಸ್ಟಿಕ್ ಮ್ಯಾನುವಲ್ ಇನ್ ಸೈಕಿಯಾಟ್ರಿ ಅಂಡ್ ಸೈಕಾಲಜಿ  ಪ್ರಕಾರ  ಪದೇ ಪದೇ ಕುಡಿತ ಹಾಗು ಅದರ ದುಷ್ಪರಿಣಾಮಗಳನ್ನು ಲೆಕ್ಕಿಸದೆ ಕುಡಿತದ ಹಾನಿಗೊಳಗುವರೇ  ಹೆಚ್ಚು. ಮುಂದುವರೆದು ಇದರ ವ್ಯಾಖ್ಯಾನಗಳನ್ನು ಗಮನಿಸಿದರೆ ಮದ್ಯದ ಮೇಲಿನ ಅವಲಂಬನೆಯು ಮದ್ಯದಿಂದಾಗುವ ಹಾನಿಯನ್ನು ವಿವರಿಸುತ್ತದೆ. ಇದು ಸಹಿಷ್ಣುತೆ ಹಾಗು ಕುಡಿತಕ್ಕೆ ಎಳೆಯುವ ಅನಿಯಂತ್ರಿತ ಚಟವಾಗಿ ಪರಿಣಮಿಸುತ್ತದೆ. ಮನೋಶಾಸ್ತ್ರ ಮತ್ತು ಮಾನಸಿಕತೆಗಳ ಲೆಕ್ಕಾಚಾರದಲ್ಲಿ ಮದ್ಯದ ಮೇಲಿನ ಅವಲಂಬನೆಯು ದುಶ್ಚಟಕ್ಕೆ ದಾರಿ ಮಾಡಿಕೊಡುತ್ತದೆ.

ಚಿತ್ರ ಕೃಪೆ master file
ಮದ್ಯಪಾನಕ್ಕೆ ಕುಡುಕರ ಸಂಬಂಧವನ್ನು ಹಲವು ವಿಧಗಳಲ್ಲಿ ಅಳವಡಿಸಿ ಅದಕ್ಕೆ ಸೂಕ್ತ ಪದ ಬಳಕೆ ಮಾಡಲಾಗುತ್ತದೆ. ಉಪಯೋಗ , ದುರುಪಯೋಗ , ಅತ್ಯಧಿಕ ಉಪಯೋಗ , ಹಾನಿಕಾರಕ , ವ್ಯಸನಿ , ಮತ್ತು ಅವಲಂಬನೆಗಳು ಇತ್ಯಾದಿ ಶಬ್ದಗಳು ಕುಡಿತದ ಚಟಗಳನ್ನು ವ್ಯಾಖ್ಯಾನಿಸುವ ವಿವಿಧ ಪದಗಳಾಗಿವೆ. ಆದರೆ ಈ ಎಲ್ಲಾ ಪದ ಪ್ರಯೋಗಗಳು ಆಯಾ ಸಂದರ್ಭವನ್ನು ಅನುಸರಿಸಿ ಅಲ್ಲಲ್ಲಿ ಬಳಸಬೇಕಾಗುತ್ತದೆ. ಮದ್ಯದ ಉಪಯೋಗವು ಸಾಮಾನ್ಯ ರೀತಿಯಲ್ಲಿ ಆ ವಸ್ತುವಿನ ಬಳಕೆ ಎಂದು ಸರಳರೀತಿಯಲ್ಲಿ ಹೇಳಬಹುದು. ಯಾವುದೇ ವ್ಯಕ್ತಿಯು ಒಂದು ಪಾನೀಯದೊಂದಿಗೆ ಮದ್ಯಸಾರವನ್ನು ಬಳಸಿದರೆ ಆತ ಮದ್ಯವನ್ನು ಉಪಯೋಗಿಸಿದನೆಂದೇ ಅರ್ಥ.  ದುರುಪಯೋಗ , ಸಮಸ್ಯಾತ್ಮಕ ಉಪಯೋಗ , ಹಾನಿ , ಮತ್ತು ಅತಿಯಾದ ಉಪಯೋಗ ಇವುಗಳು ಮದ್ಯಸಾರವನ್ನು ಸೂಕ್ತ ರೀತಿಯಲ್ಲಿ ಬಳಸಿಲ್ಲವೆಂಬುದನ್ನು ತೋರಿಸುತ್ತವೆ. ಇವು ಶಾರೀರಿಕ, ಸಾಮಾಜಿಕ ಅಥವಾ ನೈತಿಕವಾಗಿ ಕುಡಿಯುವವನನ್ನು ಅಧ:ಪತನಕ್ಕೆ ತಳ್ಳುತ್ತವೆ.   

ಮದ್ಯದ ಸುದೀರ್ಘಕಾಲದ ಉಪಯೋಗದಿಂದ ಉಂಟಾಗುವ ಪರಿಣಾಮಗಳು

ಥನಾಲಿನ ಸುದೀರ್ಘ ಬಳಕೆಯಿಂದಾಗುವ ಪರಿಣಾಮಗಳು. ಸಾಂಪ್ರದಾಯಿಕವಾಗಿ ಇದು ಗರ್ಭಿಣಿಯರಲ್ಲಿ ಹೆಚ್ಚಿನ ಅಪಾಯಾಕಾರಿ ಲಕ್ಷಣಗಳನ್ನು ತೋರಿಸುತ್ತದೆ.  ಆದರೆ ಇದರ ಪ್ರಾಥಮಿಕವಾದ ಪರಿಣಾಮಗಳೆಂದರೆ ಇದು ಮದ್ಯಪಾನ ಮಾಡುವವನನ್ನು ಇನ್ನಷ್ಟು ಕುಡಿಯುವಂತೆ ಪ್ರಚೋದಿಸುತ್ತದೆ. ಅಕಾಲಿಕ ಹಾಗು ಅನಿಯಂತ್ರಿತ ಕುಡಿತವು ದೈಹಿಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಎರಡನೆಯ ಪರಿಣಾಮವೆಂದರೆ ಕುಡಿತವನು ನಿಲ್ಲಿಸಲು ಅಸಮರ್ಥನಾಗುವುದು.  ಹೀಗೆ ಮದ್ಯವ್ಯಸನವು ನಾನಾ ವಿಧಗಳಲ್ಲಿ ತನ್ನ ಹಿಡಿತ ಸಾಧಿಸುತ್ತದೆ.

ಮದ್ಯದ ಗೀಳು ಸಾಮಾಜಿಕವಾಗಿ ವ್ಯಕ್ತಿಯನ್ನಷ್ಟೇ ಅಲ್ಲ ಆತನ ಕುಟುಂಬಕ್ಕೂ ಕೆಟ್ಟ ಹೆಸರು ತರುವ ಸಾಧ್ಯತೆ ಹೆಚ್ಚಿಗೆ ಇದೆ. ಮದ್ಯದ ಗೀಳಿನಿಂದಾಗಿ ಮನುಷ್ಯ ತನ್ನ ಅಸಹನೆ, ಹಾಗೂ ದೈಹಿಕ ಅವಲಂಬನೆಯಿಂದಾಗಿ,   ಮದ್ಯವನ್ನು ಬಿಡಲಾಗದ ದುಸ್ಥಿತಿಯನ್ನು ತಂದುಕೊಳ್ಳುತ್ತಾನೆ.  ಹೀಗಾಗಿ ಕುಡಿತವು ಸಾಮಾನ್ಯ ಪ್ರವೃತ್ತಿ ಮತ್ತು ಸಹನೆಯನ್ನು ಕಳೆದುಕೊಳ್ಳುವುದರ ಜೊತೆಗೆ ಅವಲಂಬನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕುಡಿತದ ದುರಭ್ಯಾಸವು ಹತೋಟಿ ತಪ್ಪಿ ಹೋಗುತ್ತದೆ. ಮದ್ಯದ ಗೀಳಿನಿಂದಾಗಿ ಮನುಷ್ಯ ತನ್ನ ವೈಯಕ್ತಿಕ ನೆಲೆಯಲ್ಲಿ ತನ್ನ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡು ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾನೆ.  ಒಂದು ಅಂದಾಜಿನ ಪ್ರಕಾರ ಪ್ರತಿಶತ 18ರಷ್ಟು ಮದ್ಯವ್ಯಸನಿಗಳು ಆತ್ಮಹತ್ಯೆಗೆ  ಶರಣಾಗುತ್ತಾರೆ. ಸಂಶೋಧಕರ ಪ್ರಕಾರ ಪ್ರತಿಶತ 50ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಮದ್ಯವ್ಯಸನಿಗಳು ಇಲ್ಲವೇ ಮಾದಕ ವಸ್ತುಗಳ ಅವಲಂಬಿತರ ಸಾಲಿನಲ್ಲಿವೆ. ವಯಸ್ಕರಲ್ಲಿ ಮದ್ಯಪಾನದ ಇಲ್ಲವೇ ಮಾದಕ ದೃವ್ಯಗಳ ದುರುಪಯೋಗದ ಕಾರಣಗಳು ಮಹತ್ವದ ಪಾತ್ರ ವಹಿಸುತ್ತವೆ, ಇದರಿಂದಾಗಿ %70ರಷ್ಟು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತವೆ.

ಶಾರೀರಿಕ ಆರೋಗ್ಯದ ಮೇಲಿನ ಪರಿಣಾಮಗಳು

ದ್ಯಪಾನದಿಂದ ಶರೀರದ ಆರೋಗ್ಯದ ಮೇಲೆ ಭೀಕರ ಪರಿಣಾಮ ಉಂಟಾಗುತದೆ. ಅದರಲ್ಲೂ ಯಕೃತ್ತಿನ ಮೇಲಾಗುವ ತೀವ್ರ ಹಾನಿಯಿಂದಾಗಿ  ಜಠರಕ್ಕೆ ಹಾನಿ, ಮೇದೋಜೀರಕದ ಉರಿಯೂತ, ಮೂರ್ಛೆ ರೋಗ, ನರಗಳ ದೌರ್ಬಲ್ಯ , ಸ್ಮೃತಿಭ್ರಮಣ, ಹೃದಯ ರೋಗ, ಅಪೌಷ್ಟಿಕತೆ, ಲೈಂಗಿಕ ಶಕ್ತಿಯ ಕುಸಿತ, ಇವು ಸಾಮಾನ್ಯವಾಗಿ ಮದ್ಯವ್ಯಸನಿಗಳನ್ನು ಕಾಡುವ ಕಾಯಿಲೆಗಳಾಗಿವೆಯಲ್ಲದೆ  ಕೆಲವು ಸಂದರ್ಭಗಳಲ್ಲಿ ಮದ್ಯದ ಗೀಳು ಇರುವವರು ಸಾವೀಗಿಡಾಗಬಹುದು. ಸ್ಮರಣಶಕ್ತಿ ಮತ್ತು  ಗ್ರಹಣ ಶಕ್ತಿಗಳು ಭೀಕರವಾಗಿ ಹಾಳಾಗುವುದೇನು ಮದ್ಯವ್ಯಸನಿಗಳಲ್ಲಿ ಅಪರೂಪವಲ್ಲ.

ಒಂದು ಅಂದಾಜಿನ ಪ್ರಕಾರ ಶೇಕಡಾ10ರಷ್ಟು ಬುದ್ದಿ ಮಾಂದ್ಯ ಪ್ರಕರಣಗಳು ಮದ್ಯವ್ಯಸನಿಗಳಿಗೇ ಸಂಬಂಧಿಸಿದ ಮಾನಸಿಕ ರೋಗ, ಇದು ಸಾಬೀತಾಗಿದೆ  ಕೂಡಾ ಮದ್ಯಪಾನಿಗಳಿಗೆ ಇದು ಎರಡನೆಯ ತರಹದ  ಕಾಯಿಲೆಯಾಗಿದೆ. ಶಾರೀರಿಕ ಇನ್ನಿತರ ಪರಿಣಾಮಗಳೆಂದರೆ ಅಧಿಕಗೊಳ್ಳುವ ಹೃದಯದ ಕವಾಟಿನ ಕಾಯಿಲೆ, ಅಜೀರ್ಣತೆ,  ಜಠರ ರೋಗ ಮತ್ತು ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇದೆ. ನಿರಂತರ ಮದ್ಯಸೇವನೆಯಿಂದ ಕೇಂದ್ರ ನರಮಂಡಲ ವ್ಯವಸ್ಥೆ ಮತ್ತು ನರಮಂಡಲದ ಇತರ ಚಟುವಟಿಕೆಗಳ ಭಾಗಗಳು ಹಾನಿಗೊಳಗಾಗುವ ಸಾಧ್ಯತೆ ಇದೆ. ಮದ್ಯಪಾನಿಗಳ ಬಹುತೇಕ ಸಾವುಗಳು ಅವರ ಹೃದಯದ ಕವಾಟುಗಳ ತೊಂದರೆ ಮತ್ತು ದೌರ್ಬಲ್ಯದಿಂದ ಉಂಟಾಗುವ ಸಾಧ್ಯತೆಗಳೇ ಹೆಚ್ಚು.

ಮಾನಸಿಕ ಆರೋಗ್ಯದ ಪರಿಣಾಮಗಳು

ಸುದೀರ್ಘ ಕಾಲದ ಮದ್ಯಪಾನದ ದುರುಪಯೋಗವು ಬಹಳ ದೊಡ್ಡ ಪ್ರಮಾಣದಲ್ಲಿ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಮದ್ಯದ ದುರುಪಯೋಗವು ಕೇವಲ ಶರೀರಕ್ಕಷ್ಟೆ ವಿಷಕಾರಿಯಲ್ಲ, ಅದು ಮೆದುಳಿನ ಕಾರ್ಯವನ್ನೂ ಕುಂಠಿತಗೊಳಿಸಿ ದೀರ್ಘಕಾಲಿಕ ಪರಿಣಾಮಗಳನ್ನು ಹೊತ್ತು ತರುತ್ತದೆ. ಮಾನಸಿಕ ಏರಿಳಿತಗಳು ಮದ್ಯಪಾನಿಗಳಲ್ಲಿ ಸಾಮಾನ್ಯ. ಉದಾಹರಣೆಗಾಗಿ ಆತಂಕ, ಮತ್ತು ಒತ್ತಡ ಸಂಬಂಧಿತ ಅಸ್ತವ್ಯಸ್ತೆಗಳು ಮನೋರೋಗಕ್ಕೆ ಕಾರಣವಾಗುತ್ತದೆ. ಹೀಗಾಗಿ ತೀವ್ರತರವಾದ ಮನೋವಿಕಾರ ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಮನೋರೋಗದ ಲಕ್ಷಣಗಳು ಆರಂಭಿಕವಾಗಿ ಮದ್ಯವನ್ನು ಬಿಟ್ಟಾಗ ಹೆಚ್ಚಾಗಿ ಕಂಡು ಬರಬಹುದು. ಆದರೆ ನಿಯಮಿತವಾಗಿ ಅದರ ಮೇಲಿನ ಹಿಡಿತ ಆರೋಗ್ಯವನ್ನು ಸುಧಾರಣೆಯತ್ತ  ಕೊಂಡೊಯ್ಯಬಲ್ಲದು, ಇಲ್ಲವೇ ಸಂಪೂರ್ಣ ಮಾಯವಾಗಿ ಹೋಗಬಹುದು. ಮನೋವ್ಯಾಧಿ, ಗೊಂದಲಮಯ ಮನಸ್ಥಿತಿ, ಮೆದುಳಿನ ಜೀವಕೋಶದ ಲಕ್ಷಣಗಳು ಸತತ ಕುಡಿತದಿಂದ ಉದ್ಭವಿಸಬಹುದು,ಇದೇ ಸಂದರ್ಭದಲ್ಲಿ ಅತ್ಯಂತ ಛಿದ್ರ ಮನಸ್ಥಿತಿಗಳು ಸಹ ಮದ್ಯಪಾನದ ದುರುಪಯೋಗದಿಂದ ಸಂಭವಿಸಬಹುದು. ಅಧಿಕ ಮದ್ಯದ ಗೀಳಿನಿಂದ ಗಾಬರಿಗೊಳ್ಳುವ ಬೆಚ್ಚಿ ಬೀಳುವ ಅವ್ಯವಸ್ಥೆ ಶರೀರದಲ್ಲಿ ಉಂಟಾಗೋತ್ತದೆ. ದೀರ್ಘಕಾಲದ ವರೆಗೆ ಮದ್ಯವ್ಯಸನಿಗಳಿಗೆ ಮೆದಳಿನ ಕಾರ್ಯಚಟುವಟಿಕೆಗಳ ಕುಸಿತದ ಲಕ್ಷಣ ಕಾಣುತ್ತದೆ. ಭಾಗಶ: ಕುಡಿತ ತ್ಯಜಿಸಿದ ನಂತರ ಇಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬರಬಹುದಾಗಿದೆ.

ಪ್ರಮುಖವಾಗಿ ಮದ್ಯದ ಗೀಳಿನವರಿಗೆ ಖಿನ್ನತೆಯ ಪರಿಸ್ಥಿತಿ ಮತ್ತು ಭಯ ಹಾಗೂ ಭ್ರಾಂತಿಯ ಲಕ್ಷಣಗಳು ಸರ್ವೆ ಸಾಮಾನ್ಯ.  ಮದ್ಯಪಾನದ ಅತಿ ಸೇವನೆಯು ಅವರ ಅರೋಗ್ಯದ ಕುಸಿತಕ್ಕೆ ಮೂಲವಾಗುತ್ತದೆ. ಇವುಗಳೊಂದಿಗೆ ಮನಸ್ಸಿನ ಭ್ರಾಂತಿ ಉಂಟಾಗುವುದು, ಖಿನ್ನತೆಯ ಸಂದರ್ಭದಲ್ಲಿ ಆತನ ಒತ್ತಡದ ಪ್ರಮಾಣವು ಆತನಿಗೆ ಒಂದು ರೀತಿಯ ಕ್ಷೀಣತೆಗೆ ಎಡೆಮಾಡುತ್ತದೆ. ಎರಡನೆಯದೆಂದರೆ ಅದರ ರಾಸಾಯನಿಕ ದುಷ್ಪ್ರಭಾವ ಅಥವಾ ವಿಷಕಾರಕ ಪರಿಣಾಮಗಳು ಅತ್ಯಧಿಕ ಮದ್ಯಪಾನಿಗಳಿಗೆ ಸಾಮಾನ್ಯ ಲೋಪವಾಗಿದೆ. ಹೀಗಾಗಿ ಮೊದಮೊದಲು ಇದು ಒಂದು ಸರಳ ಕಾಯಿಲೆಯಂತೆ ಕಂಡರೂ ಅದು ಮನುಷ್ಯನ ಶರೀರವನ್ನು ಅರೆಜೀವಕ್ಕೆ ತಂದು ನಿಲ್ಲಿಸುತ್ತದೆ. ಇನ್ನೂ ಹೆಚ್ಕಿನ ಮಾದಕ ಚಟಗಳಿಗೆ ಬಲಿಯಾದ ಮದ್ಯದ ಗೀಳಿನವರಿಗೆ ಅತಿ ಹೆಚ್ಚಾದ ಖಿನ್ನತೆಯ ಸಾಧ್ಯತೆ  ಇರುತ್ತದೆ. ಅತಿಯಾದ ಕುಡಿತವು ಮಾನಸಿಕ ವಿಷಣ್ಣತೆಯನ್ನು ತರುವುದಲ್ಲದೇ ಕುಡಿತದ ದುರಭ್ಯಾಸವು "ಸ್ವತಂತ್ರ" ಎನ್ನುವ ಏಕೈಕ ಕಾಯಿಲೆಗಳನ್ನು ತರದೇ ಹಲವಾರು ಖಿನ್ನತೆಗಳ ಮೂಲವಾಗಿರುತ್ತದೆ. ಇದು ಎಲ್ಲಡೆ ಹಬ್ಬುವ ಮಾನಸಿಕ ವ್ಯಾಧಿಯಾಗಿರುತ್ತದೆ. ಇದನ್ನು ಅತಿಯಾದ "ಕುಡಿತದ-ದುಷ್ಪರಿಣಾಮದ ಕಾರಣ" ಎನ್ನಬಹುದು. ಅತಿಯಾಗಿ ಕುಡಿಯುವವರು ಮತ್ತು ನಿರಂತರವಾಗಿ ಕುಡಿಯುವವರಿಗೆ ಆತ್ಮಹತ್ಯೆಯ ಭಾವನೆಗಳ ತೀವ್ರತೆ ಹೆಚ್ಚಾಗಿ ಕಾಣಬರುತ್ತದೆ. ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳು ಮತ್ತು ಸಾಮಾಜಿಕವಾಗಿ ಮದ್ಯದ ಗೀಳಿರುವವರನ್ನು ಕಡೆಗಣಿಸುವದರಿಂದ ಅವರಿಗೆ ಒಂಟಿತನ ಕಾಡುವುದು ಸಹಜವಾಗಿದೆ. ಇಂತಹ ಸಾಮಾನ್ಯ ಪರಿಣಾಮಗಳಿಂದಾಗಿ ಅವರು ಅತ್ಮಹತ್ಯೆಗೆ ಸಹಜವಾಗೇ ಯತ್ನಿಸುತ್ತಾರೆ. ವಯಸ್ಕರಾದ ಮದ್ಯವ್ಯಸನಿಗಳಲ್ಲಿ ಆತ್ಮಹತ್ಯೆ ಪ್ರಮಾಣವು ಗಣನೀಯ ಪ್ರಮಾಣದಲ್ಲಿದೆ. ಮದ್ಯದ ಅತಿಯಾದ ದುರುಪಯೋಗ ಅಥವಾ ಅದರ ಅತಿ ಸೇವನೆಯು ಅವರನ್ನು ಆತ್ಮಹತ್ಯೆಗೆ ಸಲೀಸಾಗಿ ಕರೆದೊಯ್ಯುತ್ತದೆ.

ಸಾಮಾಜಿಕ ಪರಿಣಾಮಗಳು

ದ್ಯದ ಗೀಳಿನಿಂದ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಸುದೀರ್ಘಕಾಲದ ಮದ್ಯಪಾನವು ಮೆದುಳಿನಲ್ಲಿನ ಹಲವಾರು ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಆತನನ್ನು ದೌರ್ಬಲ್ಯದೆಡೆಗೆ ನೂಕುತ್ತವೆ.  ಹೀಗೆ ವಿಷಕಾರಿಯಾದ ಅತಿ ಮದ್ಯಪಾನ ತನ್ನ ವಿಷವನ್ನು ಶರೀರವಲ್ಲದೇ ಸಾಮಾಜಿಕವಾದ ಖಿನ್ನತೆಯಲ್ಲೂ  ತೋರುತ್ತದೆ.  ಮದ್ಯಪಾನದ ದುರುಪಯೋಗವು ಅಪರಾಧದೆಡೆಗೆ ಕೊಂಡೊಯ್ಯುವ ಸಾಧ್ಯತೆಗಳು ಅತಿ ಹೆಚ್ಚು. ಉದಾಹರಣೆಗೆ ಮಕ್ಕಳ ಮೇಲಿನ  ದೌರ್ಜನ್ಯ, ಮನೆಯಲ್ಲಿ ಕ್ರೌರ್ಯ, ಅತ್ಯಾಚಾರಗಳು, ಕಳ್ಳತನಗಳು ಮತ್ತು ಹಲ್ಲೆಗಳು ಸಾಮಾನ್ಯವಾಗಿ ಕಾಣಿಸುತ್ತವೆ. ಮದ್ಯದ ಗೀಳು ಕೆಲಸ ಕಳೆಯಬಹುದು, ಇದರಿಂದಾಗಿ ಆರ್ಥಿಕ ತೊಂದರೆಗಳು ಅಧಿಕಗೊಂಡು ತಾನು ವಾಸಿಸುವ ಗೃಹಸೌಲಭ್ಯವನ್ನೂ ಸಹ ಕುಡುಕರು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು,  ಹೊತ್ತಿಲ್ಲದ ಹೊತ್ತಲ್ಲಿ ಕುಡಿಯುವುದು, ಮತ್ತು ಅಸಭ್ಯವಾಗಿ ವರ್ತಿಸುವುದು, ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳುವುದು ಹಲವಾರು ಅಪರಾಧಗಳಿಗೆ ಎಡೆ ಮಾಡಿಕೊಡುತ್ತದೆ. ಉದಾಹರಣೆಗೆ ಕುಡಿದು ವಾಹನ ಚಾಲನೆ, ಅಥವಾ ಸಾರ್ವಜನಿಕ ವಲಯದಲ್ಲಿ ಗೊಂದಲ, ಅಥವಾ ನಾಗರಿಕ ಕಾನೂನು ಉಲ್ಲಂಘನೆಯ ಹಾಗು ಇತರರಿಗೆ ಘಾಸಿಯಾಗುವಂತೆ ವರ್ತಿಸುವುದು ದಂಡಕಟ್ಟುವುದು ಇತ್ಯಾದಿ. ಮದ್ಯಪಾನ ಮಾಡಿದ ಸಮಯದಲ್ಲಿನ ಆತನ ನಡವಳಿಕೆ ಮತ್ತು ನಿಯಂತ್ರಣ ತಪ್ಪಿದ ಸ್ವಾಧೀನತೆಯು ಖಂಡಿತವಾಗಿಯೂ ಸುತ್ತಮುತ್ತಲಿನವರಲ್ಲಿ ಅಸಹ್ಯ ಹುಟ್ಟಿಸುವುದಲ್ಲದೇ ಕುಟುಂಬ ಮತ್ತು ಸ್ನೇಹಿತರಲ್ಲಿನ ವಿಶ್ವಾಸಕ್ಕೆ ಧಕ್ಕೆ ತರಬಹುದು. ದಾಂಪತ್ಯ ಜೀವನದಲ್ಲಿ ಚಕಮಕಿ ವಿಚ್ಛೇದನಕ್ಕೆ ದಾರಿ ಮಾಡಿಕೊಡಬಹುದು.ಇಲ್ಲವೇ ಮನೆಯಲ್ಲಿನ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುವ ಸಾಧ್ಯತೆ ಇದೆ. ಇದು ಸ್ವಾಭಿಮಾನಕ್ಕೆ ಸಾಮಾಜಿಕ ಸ್ವಾತಂತ್ರದ ಸ್ಥಾನಮಾನಕ್ಕೆ ಧಕ್ಕೆ ತರಬಹುದಲ್ಲದೇ ಹಲವಾರು ಬಾರಿ ಸೆರೆಮನೆವಾಸದ ಶಿಕ್ಷೆಗೂ ಕಾರಣವಾಗುತ್ತದೆ. ಮದ್ಯದ ಗೀಳು ಮಕ್ಕಳ ಬಗೆಗಿನ ನಿರ್ಲಕ್ಷ್ಯಕ್ಕೂ ಕಾರಣವಾಗುತ್ತದೆ. ಹೀಗಾಗಿ ಮದ್ಯವ್ಯಸನಿಗಳ ಮಕ್ಕಳ ಮೇಲೂ ಸಾಮಾಜಿಕವಾಗಿ ದುಷ್ಪರಿಣಾಮ ಬೀರುತ್ತದೆ. ಮಕ್ಕಳು ದೊಡ್ಡವರಾದ ನಂತರವೂ ಅವರ ಮಾನಸಿಕ ಭಾವನೆಗಳ ಮೇಲೆ ತಮ್ಮ ಪೋಷಕರ ಈ ವ್ಯಸನ ಪರಿಣಾಮ  ಬೀರುತ್ತದೆ.

ಹಾಲೋಸಿನೆಶನ್ ಗೆ ಬಲಿಯಾಗುವಿಕೆ

ದ್ಯವ್ಯಸನವನ್ನು ಬಿಟ್ಟಿದ್ದನ್ನು ಇನ್ನೂ ಹಲವಾರು ದುರಭ್ಯಾಸಗಳಿಗೆ ಹೋಲಿಸಿದಾಗ ಒಮ್ಮೆಲೆ ಬಿಟ್ಟಾಗ ಇದು ತೀವ್ರತರವಾದ ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು . ಉದಾಹರಣೆಗೆ ಹೆರೊಯಿನ್ ತ್ಯಜಿಸಿದವರ ಪ್ರಕರಣಗಳಲ್ಲಿ ಇದು ಅಷ್ಟಾಗಿ ಘಾತಕಕಾರಿಯಲ್ಲ ಎನಿಸುತ್ತದೆ. ಆದರೆ ಹೆರೊಯಿನ್ ಅಥವಾ ಕೊಕೆನ್ ಬಿಟ್ಟವರಲ್ಲಿ ಸಾವಿನ ಪ್ರಮಾಣಗಳಿದ್ದರೂ ಅವರು ಇನ್ನುಳಿದ ಭೀಕರ ಖಾಯಿಲೆಗಳಿಗೆ ತುತ್ತಾಗಿ ಸಾಯುವ ಸಾಧ್ಯತೆಗಳೇ ಅಧಿಕವಾಗಿದೆ. ಅತಿಯಾದ ಆಯಾಸ ಅಥವಾ ತೀವ್ರತರವಾದ ಯಾತನೆಯಿಲ್ಲದೆ ಅದರಿಂದ ದೂರವಾದ ಉದಾಹರಣೆಗಳೂ ಇಲ್ಲದಿಲ್ಲ. ಮದ್ಯವ್ಯಸನಿಗೆ ಒಂದು ವೇಳೆ ಗಂಭೀರ ಸ್ವರೂಪದ ಖಾಯಿಲೆಗಳಿಲ್ಲದಿದ್ದರೆ ಸಾವಿನ ಪ್ರಮಾಣ ಅಷ್ಟಾಗಿ ಇರುದಿಲ್ಲ. ಆದರೆ ಉತ್ತಮವಾಗಿ ಇದನ್ನು ಸಮತೋಲನಗೊಳಿಸಿದರೆ ಅಪಾಯ ಕಡಿಮೆ. ಆದರೆ ಒಮ್ಮೆಲೆ ಬಿಟ್ಟ ಇವರು ಅಪಾಯವನ್ನು ಎದುರಿಸುವುದು ಸರ್ವೆ ಸಾಮಾನ್ಯ. ಹಲವಾರು ಉದ್ವಿಗ್ನಕಾರಿ ಮಾದಕ ದೃವ್ಯಗಳಾದ ಬಾರ್ಬಿತುರೇಟ್ಸ್ ಮತ್ತು ಬೆಂಜೊಡೈಯಾಜೆಪಿನೀಸ್ ಗಳನ್ನು  ಹಠಾತ್ ಆಗಿ ಬಿಟ್ಟಾಗ ಮದ್ಯದ ಗೀಳಿನಷ್ಟೆ ಸಾವಿನ ಅಪಾಯಗಳನ್ನು ತಂದೊಡ್ಡುವುದು ಎಂದು ಹೇಳಬಹುದು.

ಮದ್ಯದ ಗೀಳಿನವರಲ್ಲಿನ ಪ್ರಾಥಮಿಕ ದೋಷವೆಂದರೆ ಹಾಲೋಸಿನೆಶನ್ ಗೆ ಬಲಿಯಾಗುವಿಕೆ, ಇದು ಕೇಂದ್ರ ನರಮಂಡಲ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸುತ್ತದೆ. ಇದು ಮೆದುಳನ್ನು ಕುಂಠಿತಾವಸ್ಥೆಗೆ ಸಾಗಿಸುತ್ತದೆ ಇಂತಹ ವ್ಯವಸ್ಥೆಯು ನಿರಂತರ ಕುಡಿತದಿಂದ ಮತ್ತಷ್ಟು ಅಸ್ತವ್ಯಸ್ತಗೊಳ್ಳುವುದಲ್ಲದೇ ಅಸಹನೆ ಮತ್ತು ದೈಹಿಕ ಅವಲಂಬನೆಯನ್ನು ತೀವ್ರಗೊಳಿಸುತ್ತದೆ. ಅತಿಯಾದ ಮದ್ಯಪಾನವು ಹಲವು ಅಗೋಚರ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು. ಕುಡಿತವನ್ನು ಹಠಾತ್ ಆಗಿ ನಿಲ್ಲಿಸಿದಾಗ ಅಥವಾ ಅದನ್ನು ಅನಿಯಮಿತಗೊಳಿಸಿದಾಗ ಮಾನವನ ನರಮಂಡಲವು ಅನಿಯಂತ್ರಿತವಾಗಿ ನರಮಂಡಲದ ಕೇಂದ್ರಕ್ಕೆ ನಿರುಪಯುಕ್ತವಾಗಿ ಮಾರ್ಪಡುತ್ತದೆ. ಇಂತಹ ಪರಿಸ್ಥಿತಿಯು ತೀವ್ರತರವಾದ ವ್ಯಾಕುಲತೆ, ಜೀವಭಯದ ನರಗಳ ಹಿಡಿತಗಳು, ದ್ವಂದ್ವತೆ ಅಪಾಯಗಳು, ಖಾಲಿತನ, ನಡುಕಗಳು ಹಾಗು ಕೆಲವೊಮ್ಮೆ ಹೃದಯ ವೈಫಲ್ಯವನ್ನೂ ತಂದೊಡ್ಡುತ್ತವೆ.

ಮದ್ಯವನ್ನು ತ್ಯಜಿಸಿದ ನಂತರದ ಹಲವಾರು ದುಷ್ಪರಿಣಾಮಗಳು ಒಂದರಿಂದ ಮೂರು ವಾರಗಳ ಅವಧಿಯಲ್ಲಿ ತನ್ನ ಲಕ್ಷಣಗಳನ್ನು ತೋರುತ್ತದೆ. ಕಡಿಮೆ ಪ್ರಮಾಣದ ತೀವ್ರತೆಯುಳ್ಳವೆಂದರೆ ಮತಿ ಭ್ರಮಣೆ, ವ್ಯಾಕುಲತೆ, ಮತ್ತು ನರಗಳ ದೌರ್ಬಲ್ಯಗಳು ಮದ್ಯ ಬಿಟ್ಟ ನಂತರದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ. ಇದು ಕ್ರಮೇಣ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ತನ್ನ ಬೆಳವಣಿಗೆಯನ್ನು ತೋರುತ್ತದೆ. ಹಲವಾರು ಬಾರಿ ಕುಡಿತ ತ್ಯಜಿಸಿದ ನಂತರ ದೇಹವು ನರಮಂಡಲ ವ್ಯವಸ್ಥೆಯ ಕೇಂದ್ರ ಭಾಗದಲ್ಲಿನ ಕಾರ್ಯಚಟುವಟಿಕೆಯ ತಾಳ್ಮೆಮತ್ತು ಹಾಲೋಸಿನೆಶನ್ ಕ್ರಿಯೆಗಳನ್ನು ಮರುಪಡೆಯುವ ಸಾಧ್ಯತೆ ಇದೆ. ನರಗಳ ಸಂವಹನವನ್ನು ಸಾಗಿಸುವ ವ್ಯವಸ್ಥೆಯು ನಿಯಂತ್ರಣಗಳನ್ನು ಇದರಲ್ಲಿ ಒಳಗೊಳ್ಳುವಂತೆ ಮಾಡಿತ್ತದೆ.

ಕುಡಿತದ ಚಟ ಅಥವಾ ಗೀಳಿಗೆ ಅಂಟಿಕೊಳ್ಳುವಲ್ಲಿ  ವ್ಯಕ್ತಿಯ ವಯಸ್ಸು ಮತ್ತು ಮನಸ್ಸು ಮುಖ್ಯ ಪಾತ್ರವಹಿಸುತ್ತದೆ . ಕೆಲವೊಮ್ಮೆ ಸಣ್ಣ ವಯಸ್ಸಿನಲ್ಲೇ ಇದು ಆರಂಭಗೊಳ್ಳುತ್ತದೆ. ಕೆಲವರು ಮೊದಲೇ ಮದ್ಯದ ಬಗ್ಗೆ ತಮ್ಮ ಒಲವನ್ನು ತೋರಿದ್ದರೆ ಅಥವಾ ಈ ಗೀಳಿನವರಿಂದ ಪ್ರಭಾವಿತರಾಗಿದ್ದರೆ ಅಂತವರು ಎಳೆವಯಸ್ಸಿನಲ್ಲೇ ಇಂತಹ ಚಟಕ್ಕೆ ಅಂಟಿಕೊಳ್ಳುವ ಸರಾಸರಿಯಲ್ಲಿ ಮೊದಲಿಗರಾಗಿರುತ್ತಾರೆ. ಕೌಟುಂಬಿಕ ಹಿನ್ನಲೆಯೂ ಕುಡಿತದ ಗೀಳಿಗೆ ಬಲಿಯಾಗುವ ಸಾಧ್ಯತೆಯನ್ನು ಹೆಚ್ಚಾಗಿಸುತ್ತದೆ, ಹಲವಾರು ಕುಟುಂಬಗಳ ಇತಿಹಾಸವು ಇದಕ್ಕೆ  ಪೂರಕವಾಗಿದೆ.   ಈ ಕುರಿತು ಪ್ರಕಟಗೊಂಡ ಒಂದು ಲೇಖನದ ಪ್ರಕಾರ ಇದು ಅನುವಂಶೀಯ ಕಾರಣಗಳಿಗೂ ಸಂಬಂಧಿತವಾಗಿದೆ. ಕೆಲವು ವಂಶವಾಹಿನಿಗಳ ಮೂಲದಲ್ಲೇ ಇಂತಹ ಮದ್ಯದ ಗೀಳಿನ ಪರಿಣಾಮಗಳು ಇರುವುದರಿಂದ ಮದ್ಯದ ಚಟಕ್ಕೆ ಅಂಟಿಕೊಳ್ಳುವ ಉದಾಹರಣೆಗಳನ್ನು ಕಾಣಬಹುದಾಗಿದೆ. ಈ ತೆರನಾದ ಅಪಾಯಕಾರಿಯಾದ ಚಟವೂ ವಯಸ್ಕರಲ್ಲಿ ಅತಿ ಹೆಚ್ಚಿನ ಸಂವೇದನೆಗಳನ್ನು ಹುಟ್ಟಿಸಿ ಅನುವಂಶೀಯ ಜೀವಕೋಶಗಳು ಮೆದುಳಿನ ಕಾರ್ಯವೈಖರಿಯನ್ನು ಬದಲಿಸಿಬಿಡಬಹುದು. ಹೀಗಾಗಿ ಕುಡಿತದ ಚಟಕ್ಕೆ ಬಲಿಯಾಗುವವರು ಸಾಮಾನ್ಯವಾಗಿ ಅತಿ ಹೆಚ್ಚು ಬಲಿಪಶುವಾಗುವ ಸಂದರ್ಭಗಳೇ ಜಾಸ್ತಿಯಾಗಿರುತ್ತವೆ. ಮೆದುಳಿನ ಈ ಸಂವೇದನೆಯಿಂದಾಗಿ ಮದ್ಯದ ಅವಲಂಬನೆಯು ಅಧಿಕವಾಗುತ್ತದೆ. ಸುಮಾರು 40 ಪ್ರತಿಶತದಷ್ಟು ಮದ್ಯದ ಗೀಳು ಇರುವವರು ತಮ್ಮ ಹರೆಯದ ಕೊನೆಯ ಹಂತಗಳಲ್ಲಿ ಇದಕ್ಕೆ ಬಲಿಯಾಗುತ್ತಾರೆ. ಅದರೆ ಸಾಮಾನ್ಯವಾಗಿ ಮದ್ಯದ ಗೀಳಿರುವವರು ಯುವಕರಾಗಿದ್ದಾಗ ಅಥವಾ ಆರಂಭಿಕ ಯೌವನದಲ್ಲಿ ಇದು ನಡೆಯುತ್ತದೆ. ಬಾಲ್ಯಾವಸ್ಥೆಯಲ್ಲಿ ಸಹ ಮದ್ಯದ ಗೀಳು ಅಥವಾ ಇತರ ಮಾದಕ ದೃವ್ಯಗಳ ಸಮಸ್ಯೆಯ ಚಟಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿ ಸಂಕೀರ್ಣವಾದ ಸಮಸ್ಯೆ ಅಥವಾ ಅನುವಂಶೀಯ ಕಾರಣಗಳು ಮತ್ತು ಸುತ್ತಮುತ್ತಲಿನ ವಾತಾವರಣ ಅವರ ಮನಸ್ಸಿನ ಮೇಲೆ ಬೀರಿರುವ ಪ್ರಬಾವ ಇದಕ್ಕೆ ಕುಮ್ಮಕ್ಕು ನೀಡಬಹುದು. ಇದರಿಂದಾಗಿ ಮದ್ಯದ ಗೀಳಿಗೆ ಅಂಟಿಕೊಳ್ಳುವ ಪ್ರಸಂಗಗಳು ಉದ್ಭವಹಿಸುತ್ತವೆ. ಮದ್ಯದ ಪಾಶಕ ಶಕ್ತಿಯಿಂದ ಕೂಡಾ ಅನುವಂಶೀಯ ಲಕ್ಷಣಗಳು ಪ್ರಭಾವಿತವಾಗುತ್ತವೆ,  ಇದರಿಂದಾಗಿ ಕುಡಿತದ ಚಟಕ್ಕೆ ಬಲಿಯಾಗುವ ಸಂದರ್ಭಗಳೇ ಹೆಚ್ಚು,  ಉತ್ತಮ ಸಲಹೆ ಸೂಚನೆ ಹಾಗು ಕೌಟುಂಬಿಕ ಸಹಕಾರವು ಮದ್ಯದ ಗೀಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಮದ್ಯದ ಗೀಳು ಕೇವಲ ಅನುವಂಶೀಯತೆಯನ್ನು ಮಾತ್ರ ಕಾರಣವನ್ನಾಗಿಸುವದಿಲ್ಲ,  ಈ ಪ್ರಕ್ರಿಯೆಯಲ್ಲಿ ದೈಹಿಕ ಬದಲಾವಣೆ ಮತ್ತು ಮೆದುಳಿನಲ್ಲಿನ ರೂಪಾಂತರಗಳು ಒಂದೊಕ್ಕೊಂದು ತಮ್ಮ ಏಕ ಕೋಶಗಳ ವಾಹಿನಿಗಳೊಂದಿಗೆ ಪೂರಕವಾಗಿರುತ್ತದೆ.  ಪ್ರತಿಯೊಂದು ವಂಶವಾಹಿನಿಯ ಪರೀಕ್ಷೆಗೆ ಒಂದು ಜೀವವಿಜ್ಞಾನದ ಪರೀಕ್ಷೆ ಅಗತ್ಯವಿದೆ.  ಮದ್ಯದ ಗೀಳು ಮತ್ತು ಇತರೆ ಮಾದಕ ದೃವ್ಯಗಳ ಪರೀಕ್ಷೆಯನ್ನೂ ಮಾಡಬಹುದಾಗಿದೆ.  ಮನುಷ್ಯರು ಸೇವಿಸುವ ಮಾದಕ ವಸ್ತುಗಳನ್ನು ಪಡೆಯುವ ವಂಶವಾಹಿನಿಗಳು ಸುಮಾರಾಗಿ ಅದರ ವ್ಯತ್ಯಾಸಗಳನ್ನು ತಿಳಿಸುತ್ತವೆ.  ಯಾರು ಈ  ಜೀವವಿಜ್ಞಾನದ ಅಂದರೆ ಇಂತಹ ಮಾದಕ ಹವ್ಯಾಸಗಳಿಗೆ ಈಡಾಗುತ್ತಾರೋ ಅವರಲ್ಲಿ ಮಾದಕ ದೃವ್ಯಗಳು ಅಥವಾ ಕುಡಿತದ ಗೀಳು ಹುಟ್ಟುವುದು ಸಹಜವಾದರೂ ಮಾದಕ ವಸ್ತುಗಳನ್ನು ಸೇವಿಸುವವರು ಕ್ರಮೇಣ ಎಲ್ಲಾ ತೆರನಾದ ವ್ಯಸನಗಳಿಗೆ ದಾಸರಾಗುವುದು  ಸರ್ವೆ ಸಾಮಾನ್ಯವಾಗಿದೆ. ಈ ತೆರನಾದ ವ್ಯಸನವು ಸಾಮಾನ್ಯವೆನಿಸಿದರೂ ಜೀವಶಾಸ್ತ್ರೀಯವಾಗಿ ಬಹುತೇಕರು ಇದಕ್ಕೆ ಬಲಿಯಾಗುತ್ತಾರೆ. ನಂತರ ಇದಕ್ಕೆ ವಿಪರೀತ ಅವಲಂಬನೆ ತೋರಿ ಮತ್ತಷ್ಟು ಮಾದಕ ವ್ಯಸನಗಳಿಗೆ ಬಲಿಯಾಗುವುದೇ ಹೆಚ್ಚು.

ನಿಜವಾಗಿ ಯಾವ ಪ್ರಮಾಣದ ಮದ್ಯಪಾನವನ್ನು ಮಾಡಲಾಗಿದೆ ಎಂದು ಗುರ್ತಿಸಲು ಸಾಮಾನ್ಯ ಪರೀಕ್ಷೆ ಎಂದರೆ ರಕ್ತದಲ್ಲಿರುವ ಮದ್ಯದ ಅಂಶ(BAC)ವನ್ನು ಪತ್ತೆಹಚ್ಚುವುದು. ಇಂತಹ ತಪಾಸಣೆಗಳು ಮದ್ಯಪಾನಿಗಳು ಮತ್ತು ಮದ್ಯಪಾನ ಮಾಡದವರ ನಡುವೆ ಯಾವುದೇ ಭೇದ ತೋರುವುದಿಲ್ಲ; ಆದರೆ ದೀರ್ಘಕಾಲದ ಮದ್ಯಪಾನವು ದೇಹದ ಮೇಲೆ ಹಲವಾರು ಗಂಭೀರ ಪರಿಣಾಮಗಳನ್ನು ಬೀರುತ್ತದೆ:

ನಿಯಂತ್ರಣ ಜೀರೊ ಟಾಲರನ್ಸ್.

ದ್ಯದ ಗೀಳು ಅಥವಾ ವ್ಯಸನವು ಇಡೀ ಸಾಮಾಜಿಕ ಸ್ವಾಸ್ಥ್ಯದ ಮೇಲೆ ತನ್ನ ದುಷ್ಪ್ರಭಾವ ಬೀರುತ್ತದೆ. ಆರೋಗ್ಯದ ಸೂತ್ರಗಳನ್ನು ಕಾಪಾಡಲು ಮದ್ಯಪಾನದಂತಹ ದುರಭ್ಯಾಸಗಳಿಗೆ ಪೂರ್ಣವಿರಾಮ ಕೊಡುವತ್ತ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗು ಉತ್ತಮ ಧೇಯೋದ್ಯೇಶದ ಸಂಘಟನೆಗಳು ಕಾರ್ಯಪ್ರವೃತ್ತವಾಗಿ ಇಂತಹ ಪ್ರಮಾಣವನ್ನು ಕಡಿಮೆ ಮಾಡಲು ಕಟಿಬದ್ದವಾಗಿವೆ. ಈ ದುರಭ್ಯಾಸವನ್ನು ನಿಯಂತ್ರಣದಲ್ಲಿಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  ಇದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಕಾಲ ಕಾಲಕ್ಕೆ ಜಾಹಿರಾತುಗಳು ಮತ್ತು ಫಲಕಗಳನ್ನು ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ಅತ್ಯಂತ ನಿಖರ ಮತ್ತು ನಂಬಿಕೆಗೆ ಯೋಗ್ಯವಾದ ಸಾಕ್ಷಿಗಳ ಆಧಾರಿತ ಶೈಕ್ಷಣಿಕ ಆಂದೋಲನಗಳನ್ನು ಕೈಗೊಳ್ಳಬೇಕಾಗುತ್ತದೆ. ಮದ್ಯಪಾನದ ದುರುಪಯೋಗ ಮತ್ತು ಕೆಟ್ಟ ಪರಿಣಾಮಗಳನ್ನು ವಿವರಿಸಬೇಕಾಗುತ್ತದೆ. ಇದಕ್ಕೆ ಸಮೂಹ ಮಾಧ್ಯಮದ ನೆರವು ಅತ್ಯಗತ್ಯವಾಗಿದೆ. ಹದಿವಯಸ್ಕರು ಮದ್ಯಪಾನ ಹಾಗು ಇತರ ಮಾದಕ ವಸ್ತುಗಳತ್ತ  ವಾಲದಂತೆ ನೋಡಿಕೊಳ್ಳಲು ಪೋಷಕರು ಅತಿ ಕಾಳಜಿ ವಹಿಸಬೇಕಾಗುತ್ತದೆ, ಮಾನಸಿಕ ನೆಮ್ಮದಿ ಕೊಡುವ ವಾತಾವರಣವನ್ನು ಅವರು ನಿರ್ಮಾಣ ಮಾಡಬೇಕಾಗುತ್ತದೆ. ಮದ್ಯ ಹಾಗು ಇತರ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕಾಗುತ್ತದೆ.

ಮದ್ಯದ ಗೀಳನ್ನು ಬಿಡಿಸಲು ಸಾಕಷ್ಟು ವಿಭಿನ್ನ ಚಿಕಿತ್ಸೆಗಳಿವೆ (ಆಂಟಿಡಿಸ್ಪೊಸೊಟ್ರಾಪಿಕ್) ಅಂದರೆ ಮದ್ಯವಿರೋಧಿ ಮದ್ದುಗಳು ಆಯಾ ಪರಿಸರ ಮತ್ತು ಆರೋಗ್ಯದ ಮೇಲೆ ಪ್ರಮುಖ ಬದಲಾವಣೆ ತರುತ್ತವೆ. ಮದ್ಯದ ಗೀಳನ್ನು ವೈದ್ಯಕೀಯವಾಗಿ ಅಥವಾ ಅದೊಂದು ಕಾಯಿಲೆ ಎಂದು ಪರಿಗಣಿಸುವವರು  ಚಿಕಿತ್ಸೆ ನೀಡುವ ಸ್ಥಳ ಹಾಗು ವಾತಾವರಣವನ್ನು ಪರಿಗಣಿಸಬೇಕಾಗುತ್ತದೆ. ಅಂದರೆ ಯಾರಿಗೆ ಯಾವ ತೆರನಾದ ಪರೀಕ್ಷೆ ಅಥವಾ ತಪಾಸಣೆ ಹಾಗು ಚಿಕಿತ್ಸೆ ಅಗತ್ಯವೆಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ.

ಬಹಳಷ್ಟು ಚಿಕಿತ್ಸೆಗಳು ಅವರು ಮದ್ಯಪಾನಕ್ಕೆ ಅಂಟಿಕೊಳ್ಳದಂತೆ ತಪ್ಪಿಸಲು ನೆರವಾಗುತ್ತವೆ. ಬಹುಮುಖ್ಯವಾಗಿ ಜನರಿಗೆ ಇದನ್ನು ಬದುಕಿನ ಉತ್ತಮ ಕ್ಷಣವೆಂದು ತಿಳಿಸಬೇಕಾಗುತ್ತದೆ. ಸಾಕಷ್ಟು ತರಬೇತಿ ಹಾಗು ತಿಳಿವಳಿಕೆ ನೀಡುವ ಮೂಲಕ ಅಲ್ಕೊಹಾಲ್ ಬಳಕೆ ಕಡಿಮೆ ಮಾಡಬಹುದಾಗಿದೆ. ಮದ್ಯಪಾನದ ಗೀಳು ಬಹು ತೆರನಾದ ದುರಭ್ಯಾಸಗಳಿಗೆ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ಆ ವ್ಯಕ್ತಿಯು ಮತ್ತಷ್ಟು ಕುಡಿತಕ್ಕೆ ಈಡಾಗುತ್ತಾನೆ. ಇಂತಹ ಸಂದರ್ಭಗಳನ್ನು ಸರಿಯಾಗಿ ವಿವರಿಸಿ ದುರಭ್ಯಾಸಗಳನ್ನು ಯಶಸ್ವಿಯಾಗಿ ಕಡಿಮೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಿಷಯುಕ್ತತೆಯನ್ನು (ಡಿಟಾಕ್ಸಿಫಿಕೇಶನ್ ) ಕಡಿಮೆ ಮಾಡುವ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಇದರಲ್ಲಿ ಸೆಲ್ಫ್ ಹೆಲ್ಪ್ ಗ್ರೂಪ್ ನಂತ  ಬೆಂಬಲಿತ ಗುಂಪುಗಳ ಚಿಕಿತ್ಸಾ ವಿಧಾನಗಳನ್ನು ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ. ಸಮೂಹದ ಚಿಕಿತ್ಸಾ ಪದ್ದತಿಯಲ್ಲಿ ಹಲವಾರು ಸಬಲ ಉಪಾಯಗಳನ್ನು ಅನುಸರಿಸಲಾಗುತ್ತದೆ. ಅಂದರೆ ಜೀರೊ ಟಾಲರನ್ಸ್ ಚಿಕಿತ್ಸಾ ಪದ್ದತಿ ಅನುಸರಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಮದ್ಯದ ಗೀಳಿನಿಂದಾಗುವ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ.

ಡಿಟಾಕ್ಸ್ ನಿರ್ವಿಷೀಕರಣ

ಮುಖ್ಯ ಲೇಖನ: Alcohol detoxification

ಲ್ಕೊಹಾಲ್ ಡಿಟಾಕ್ಸಿಫಿಕೇಶನ್ ಅಥವಾ "ಡಿಟಾಕ್ಸ್ " ಅಂದರೆ ನಿರ್ವಿಷೀಕರಣ ಅಥವಾ ಮದ್ಯಪಾನದಿಂದಾಗುವ ವಿಷಕಾರಕ ಪರಿಣಾಮ ತಡೆಯಲು ಮಾದಕ ದೃವ್ಯಗಳ ವ್ಯಸನವನ್ನು ಬಿಡಿಸಲು ಬೆಂಜೊಡೈಜೆಪಿನೆಸ್  ನಂತಹ ಔಷಧಿಗಳನ್ನು ಉಪಯೋಗಿಸಲಾಗುತ್ತದೆ. ಇಂಥ ಚಿಕಿತ್ಸೆಗಳು ಮದ್ಯದ ಗೀಳನ್ನು ಬಿಡಿಸುವ  ಕ್ರಮಕ್ಕೂ ನೆರವಾಗುತ್ತವೆ. ಇವು ಕಡಿಮೆ ಪ್ರಮಾಣದ ಪರಿಣಾಮದಲ್ಲಿ ಮದ್ಯದ ಗೀಳನ್ನು ಬಿಡುಸುವ ಲಕ್ಷಣಗಳನ್ನುಹೊಂದಿವೆ. ನಿರ್ವಿಷೀಕರಣದ ಚಿಕಿತ್ಸೆಯನ್ನು ಹೊರರೋಗಿಗಳಿಗೆ ನೀಡಬಹುದಾಗಿದೆ.  ಅತಿ ಗಂಬೀರ ಪರಿಣಾಮದ ಅಥವಾ ಗೀಳಿನ ಅವಲಂಬನೆಯ ಪ್ರಮಾಣವನ್ನು ಗಮನಿಸಿ ಅವರನ್ನು ಒಳರೋಗಿಗಳೆಂದು ಚಿಕಿತ್ಸೆ ನೀಡಲಾಗುತ್ತದೆ. ಆದರೆ ನಿರ್ವಿಷೀಕರಣವು ವಾಸ್ತವವಾಗಿ ಮದ್ಯದ ಗೀಳಿನ ರೋಗವನ್ನು ವಾಸಿ ಮಾಡುವುದಿಲ್ಲ ಆದ್ದರಿಂದ ನಿರ್ವಿಷೀಕರಣದ ಚಿಕಿತ್ಸೆಗೆ ಅದಕ್ಕೆ ಪೂರಕವಾದ ನಿಯಮಗಳನ್ನು ಅನುಸರಿಸಿ ಸೂಕ್ತ ಮಾರ್ಪಾಡು ಮಾಡಬೇಕಾಗುತ್ತದೆ. ಇಲ್ಲಿ ಮತ್ತೆ ರೋಗಿಯು ಅದೇ ಪರಿಸ್ಥಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ.

ನಿರ್ವಿಷೀಕರಣದಂತಹ ಹಲವಾರು ವಿಭಿನ್ನ ಸಮೂಹ ಚಿಕಿತ್ಸೆ ಅಥವಾ ಮಾನಸಿಕ ನೆರವಿನ ಸಹಾಯಹಸ್ತ ಪದ್ದತಿಗಳನ್ನು ಬಳಸಿ ಮದ್ಯದ ಗೀಳನ್ನು ಬಿಡಿಸಲು ಪ್ರಯತ್ನ ಮಾಡಬಹುದಾಗಿದೆ. ಸ್ವಲ್ಪಮಟ್ಟಗಿನ ಪರಿಹಾರವನ್ನೂ ಸಹ ಮಾಡಿಕೊಳ್ಳಬಹುದಾಗಿದೆ. ನೆರವಿನ ಗುಂಪುಗಳು ಪರಸ್ಪರ ಆಪ್ತಸಮಾಲೋಚನೆ ನಡೆಸುವ ಮೂಲಕ ಸಾಮಾನ್ಯವಾಗಿ ಈ ಕಾಯಿಲೆಗೆ ಒಂದು ಪರಿಹಾರ ಸೂಚಿಸಬಹುದು.

ಪಡಿತರ ಪದ್ದತಿ ಮತ್ತು ಮತ್ತು ತೀವ್ರತೆ

ಮುಖ್ಯ ಲೇಖನ: ನ್ಯಾಶನಲ್ ಇನ್ ಸ್ಟಿಟ್ಯೂಟ್ ಆನ್ ಅಲ್ಕೊಹಾಲ್ ಅಬ್ಯುಸ್ ಮತ್ತು ಅಲ್ಕೊಹಾಲಿಸಮ್ (NIAAA)

ಡಿತರ ಪದ್ದತಿ ಮತ್ತು ತೀವ್ರತೆಯನ್ನು ನಿಯಂತ್ರಿಸಲು ಮಾಡ್ ರೇಟ್ ಮ್ಯಾನೇಜ್ ಮೆಂಟ್ ಮತ್ತು ಕುಡಿತದ ಪರಿಣಾಮಗಳ ಸೂಚಿ ಪಟ್ಟಿಯನ್ನು ಅನುಸರಿಸಬೇಕಾಗುತ್ತದೆ. ಬಹಳಷ್ಟು ಮದ್ಯದ ಗೀಳು ಇರುವವರು ಇಂತಹ ಕಡಿತದ ಪಡಿತರ ವಿಧಾನವನ್ನು ಸಹಿಸದ ಮದ್ಯವ್ಯಸನಿಗಳು ಕುಡಿತವನ್ನು ನಿಯಂತ್ರಿಸಲು ಅಸಮರ್ಥರಾಗುತ್ತಾರೆ.  ಒಂದು ವರದಿ 2002 U.S.ಮೂಲದ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆನ್ ಅಲ್ಕೊಹಾಲ್ ಅಬ್ಯುಸ್ ಮತ್ತು ಅಲ್ಕೊಹಾಲಿಸಮ್ (NIAAA)ಪ್ರಕಾರ ಸುಮಾರು 17.7 ಪ್ರತಿಶತದಷ್ಟು ಜನರು ವೈಯಕ್ತಿಕ ಚಿಕಿತ್ಸೆಗೆ ಒಳಗಾಗುವದರೊಂದಿಗೆ ತಮ್ಮ ಕುಡಿತದ ಪ್ರಮಾಣವನ್ನು ಕಡಿಮೆಗೊಳಿಸಿಕೊಳ್ಳಲು ಸಮರ್ಥರಾದರು. ಇಂತಹ ಗುಂಪು ಅವಲಂಬನೆಯ ಪ್ರಮಾಣದಲ್ಲಿ ಗಣನೀಯ ಇಳಿಮುಖವನ್ನು ತೋರಿದರು. ಇದರ ಸತತ ಅಧ್ಯಯನವು ಇದೇ ವಿಷಯವನ್ನು ಬಳಸಿ 2001-2002 ರಲ್ಲಿ ಪರೀಕ್ಷೆ ನಡೆಸಿತು. ಅದೇ ವೇಳೆಗೆ ಅಂದರೆ 2004-2005 ರಲ್ಲಿ ಕುಡಿತದ ಗೀಳಿನ ಸಮಸ್ಯೆಯಿಂದ ಉಂಟಾಗುವ ಸರಳ ತೊಂದರೆಗಳನ್ನು ತಡೆಯಲಾಯಿತು. ಈ ಅಧ್ಯಯನದ ಪ್ರಕಾರ ಸಾಕಷ್ಟು ಮದ್ಯದ ದುರಭ್ಯಾಸದ ವ್ಯಕ್ತಿಗಳಲ್ಲಿ ಒಂದು ಸ್ಥಿರತೆ ತರುವಲ್ಲಿ ಸಾಫಲ್ಯ ಗಳಿಸಲಾಯಿತು. ಸುದೀರ್ಘ (60ವರ್ಷಗಳ) ನಿರಂತರ ಅಧ್ಯಯನದಿಂದ ಮದ್ಯದ ಗೀಳಿನ ಸಮೂಹದ ವ್ಯಕ್ತಿಗಳು ಮತ್ತೆ ತಮ್ಮ ಕುಡಿಯುವ ಚಟಕ್ಕೆ ಬಲಿಯಾಗಲು ಕೆಲ ಸಮಯ ತೆಗೆದುಕೊಂಡರು. ಹೀಗಾಗಿ ಕೆಲವು ಗುಣಮುಖದ ಪ್ರಕರಣಗಳು ಉತ್ತಮ ಫಲಿತಾಂಶವನ್ನು ತಂದವು. ಮದ್ಯದ ಗೀಳು ಬಿಡಿಸಲು ಹಲವಾರು ಚಿಕಿತ್ಸಾ ಉಪಾಯಗಳನ್ನು ಭಾಗಶ: ಬಳಸಲಾಗುತ್ತದೆ. ಸದ್ಯ ಚಾಲತಿಯಲ್ಲಿರುವ ಔಷಧೀಕರಣ,

ಅಂಟ್ ಅಬ್ಯುಸ್ ದಿಸಲ್ಫಿರ್ಮ್ ಔಷಧಿಗಳು ಕುಡಿತದ ದುರಭ್ಯಾಸ ಕಡಿಮೆಗೊಳಿಸಲು ಎಸೆಟಾಲ್ಡೆಹೈಡ್ ಗಳನ್ನು ರಾಸಾಯನಿಕ ಪ್ರಕ್ರಿಯೆಗಳ ವಾಸಿಗಾಗಿ ಉಪಯೋಗಿಸಲಾಗುತ್ತದೆ. ಎಸೆಟಾಲೈಹೈಡ್ ನ್ನು ಕುಡಿತದ ಅಮಲು ಅಥವಾ ಹ್ಯಾಂಗೊವರ್ ನ್ನು ಕಡಿಮೆ ಮಾಡಲು ಬಳಸುತ್ತಾರೆ.   

ಆದರೆ ವಿಪರೀತ ಕುಡಿತವು ಅನಾನುಕೂಲತೆಯನ್ನು ತರುವುದಲ್ಲದೇ ಇದರ ಪರಿಣಾಮವು ಬಹುಕಾಲದ ವರೆಗೆ ದೇಹದ ಮೇಲೆ ಅಮಲಿನ ನಶೆಯ ಗುಂಗನ್ನು ತರುತ್ತದೆ. ಈ ಔಷಧಿ ಬಳಸುವದರಿಂದ ಮದ್ಯದ ಗೀಳು ಇರುವವರು ಬಹುಮಟ್ಟಿಗೆ ತಮ್ಮ ಪ್ರಮಾಣವನ್ನು ಇಳಿಮುಖಗೊಳಿಸುತ್ತಾರೆ. ಇತ್ತೀಚಿನ 9 ವರ್ಷಗಳ ಅಧ್ಯಯನವು ಹಲವಾರು ಸಂಯುಕ್ತ ಔಷಧಿಗಳನ್ನು ಒಟ್ಟುಗೂಡಿಸಿ ಪ್ರಾಯೋಗಿಕವಾಗಿ ಪ್ರಯತ್ನಿಸಿದಾಗ ಅದರಲ್ಲೂ ಕಾರ್ಬಾಮೈಡ್ ನಂತಹ ಸಂಯುಕ್ತಗಳು ಡಿಸಲ್ಫರಾಮ್ ನೊಂದಿಗೆ ಸೇರಿ ಸಮಗ್ರ ಚಿಕಿತ್ಸೆ ನೀಡಲು ನಿರ್ಧರಿಸಿದ್ದರಿಂದ ಸುಮಾರು ಪ್ರತಿಶತ 50 ರಷ್ಟು ಮದ್ಯದ ಗೀಳನ್ನು ತಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಟೆಂಪೊಸಿಲ್ ಕ್ಯಾಲ್ಸಿಯಮ್ ಕಾರ್ಬಿಮೈಡ್ ಗಳು ಅಂಟಾಬ್ಯುಸ್ ನಂತೆಯೇ ಕೆಲಸ ಮಾಡುತ್ತವೆ; ಡಿಸಲ್ಫರಾಮ್ ನಂತಹವುಗಳ ಸಣ್ಣ ಪ್ರಮಾಣದ ಅಡ್ದ ಪರಿಣಾಮಗಳು ಸಹ ಈ ಸಂದರ್ಭದಲ್ಲಿ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ, ಹೆಪಾಟೊಟಾಕ್ಸಿಸಿಟಿ ಮತ್ತು ಖಿನ್ನತೆಗಳು ಕ್ಯಾಲ್ಸಿಯಮ್ ಕಾರ್ಬಿಮೈಡ್ ನಲ್ಲಿ ಆಗುವದಿಲ್ಲ.

ನಲ್ಟ್ರೆಕ್ಸೊನ್ ಕೂಡಾ ಒಂದು ಪೈಪೋಟಿದಾಯಕ ನಿರೋಧಕವಾಗಿದ್ದು ಇದು ವ್ಯಸನಿಗಳಿಗೆ ಪರಿಣಾಮಕಾರಿಯಾಗಿ ದುರಭ್ಯಾಸ ನಿಲ್ಲಿಸುವುದಕ್ಕೆಸಹಕಾರಿಯಾಗಿದೆ, ನಲ್ಟ್ರೆಕ್ಸೊನ್ ಮದ್ಯದ ಗೀಳು ಮತ್ತಿತರ ಮಾದಕ ದೃವ್ಯಗಳ ಬಳಕೆಗೆ ಕಡಿವಾಣ ಹಾಕುತ್ತದೆ. ಮದ್ಯದ ಸೇವನೆಯಿಂದ ದೇಹದಲ್ಲಿ ಎಂಡಾರ್ಫಿನ್ಸ್ ಗಳ ಬಿಡುಗಡೆಯಾಗಿ ಡೊಪ್ ಮೈನಗಳನ್ನು ಹೊರಸೂಸಿದಾಗ ನಲ್ಟ್ರೆಕ್ಸೊನಿ ದೇಹದಲ್ಲಿನ ಮದ್ಯದ ಪ್ರಮಾಣದ ದುಷ್ಪರಿಣಾಮಗಳು ನಿಯಂತ್ರಣಕ್ಕೆ ಬರುತ್ತವೆ. ಇದರಿಂದಾಗಿ ಕುಡಿತದ ಕೆಲಮಟ್ಟಿಗಿನ ದುಶ್ಚಟದ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ.

ಅಕ್ಯಾಂಪ್ರೊಸೇಟ್ (ಇದನ್ನು ಕ್ಯಾಂಪ್ರಾಲ್ ಎಂದೂ ಕರೆಯುತ್ತಾರೆ) ಇದು ದೇಹದ ರಸಾಯನಶಾಸ್ತ್ರವನ್ನು ಬದಲಿಸುತ್ತದೆ. ಇದರಿಂದ ಅಲ್ಕೊಹಾಲ್ ಅವಲಂಬನೆಯನ್ನು ಇಳಿಮುಖವಾಗಿವ ಸಾಧ್ಯತೆ ಇರುತ್ತದೆ. ಗ್ಲುಟಾಮೇಟ್ ನ ಪ್ರತಿಕ್ರಿಯೆಗಳಿಂದಾಗಿ ಕುಡಿತದ ಗೀಳು ಬಿಟ್ಟ ನಂತರ ನ್ಯುರೊಟ್ರಾನ್ಸ್ ಮೀಟರ್ ಯಾವಾಗಲೂ ತನ್ನ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ. ಅಂದರೆ ಕುಡಿತದ ನಂತರದ ಎಲ್ಲಾ ಪ್ರತಿಕ್ರಿಯೆಗಳಿಗೆ ಅದು ಪ್ರತಿಸ್ಪಂದಿಸಿ ಅಡ್ಡ ಪರಿಣಾಮಗಳನ್ನು ತಡೆಗಟ್ಟುತ್ತದೆ. ದಿ ಫೂಡ್ ಅಂಡ್ ಡ್ರಗ್ ಅಡ್ಮಿನಿಷ್ಟ್ರೆಶನ್ (FDA)ಸಂಸ್ಥೆಯು ಈ ಔಷಧಿಯನ್ನುಬಳಸಲು 2004 ರಲ್ಲಿ ಸಮ್ಮತಿಸಿದೆ.

ಬೆಂಜೊಡೈಜೊಪೈನ್ಸ್,ಗಳನ್ನು ಮದ್ಯದ ಗೀಳು ಬಿಡಿಸಲು ನಿರಂತರವಾಗಿ ಬಳಸುವದರಿಂದ ವ್ಯಸನದ ಪ್ರಮಾಣ ಒಮ್ಮೊಮ್ಮೆ ಹೆಚ್ಚಾಗುವ ಸಾಧ್ಯತೆ ಇವೆ. ಬೆಂಜೊಡೈಜೆಪೈನ್ಸ್ ಗಳನ್ನು ಬಹುಕಾಲದ ಮದ್ಯದ ಗೀಳನ್ನು ಬಿಡಿಸಲು ಮತ್ತು ಇದರ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಬಳಸಬಹುದಾಗಿದೆ. ಆದರೆ ಬೆಂಜೊಡೈಪೈನ್ಸ್ ಬಳಸುವವರು ಕೊಂಚ ಜಾಗೃತೆಯಿಂದ ಉಪಯೋಗಿಸಬೇಕಾಗುತ್ತದೆ ಇಂತಹ ಪ್ರಕಾರದ ಔಷಧಗಳನ್ನು ಮದ್ಯದ ಗೀಳಿನಿಂದಾಗಿ ವಿಸ್ಮೃತಿಗೆ ಒಳಗಾದವರಿಗೆ ಅಥವಾ ತೀವ್ರ ಆತಂಕಕ್ಕೊಳಗಾದವರಿಗೆ ಬಳಸಲಾಗುತ್ತದೆ. ಮೊದಲ ಬಾರಿಗೆ ಬೆಂಜೊಡೈಜೆಪೈನ್ಸ್ ಗಳನ್ನು ಬಳಸಿದಾಗ ವ್ಯಸನದ ವ್ಯಕ್ತಿಗಳಲ್ಲಿ ಇದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಾದರೂ ಮತ್ತೆ ಮದ್ಯದ ಅವಲಂಬನೆಯನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಸುಮಾರು ಕಾಲು ಭಾಗದಷ್ಟು ಜನರು ಹಿಂಜರಿತದಿಂದ ಇದರ ಬಳಕೆಯನ್ನು ಸಾಧ್ಯವಾದಷ್ಟು ನಿಲ್ಲಿಸಲು ಪ್ರಯತ್ನಿಸುತ್ತಾರೆ. ರೋಗಿಗಳು ನಿರಂತರವಾಗಿ ಬೆಂಜೊಡೈಜೆಪೈನ್ಸ್ ತೆಗೆದುಕೊಳ್ಳುವುದರಿಂದ  ತಮ್ಮ ಈ ಗೀಳಿಗೆ ತಾನಾಗಿಯೇ ಕಡಿತ ಬೀಳಬಹುದೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ದೀರ್ಘಕಾಲಿಕವಾಗಿ ಬೆಂಜೊಡೈಜೆಪೈನ್ಸ್ ನ್ನು ಉಪಯೋಗಿಸುವವರು ವೇಗವಾಗಿ ಗೀಳನ್ನು ಬಿಟ್ಟ ಉದಾಹರಣೆಗಳಿಲ್ಲ.ಈ ಸಂದರ್ಭದಲ್ಲಿ ರೋಗಿಯು ಮತ್ತೆ ಹಠಾತ್ ಕುಡಿತಕ್ಕೆ ಬಲಿಯಾಗುವ ತೀವ್ರತೆಯನ್ನೂ ಅನುಭವಿಸಬೇಕಾಗುತ್ತದೆ.  ಇದು ನಿಜವಾಗಿಯೂ ಹಲವಾರು ಬಾರಿ ಅಪಾಯಕಾರಿಯಾಗಿ ಕಾಣಬರುತ್ತದೆ. ಕುಡಿತದ ಗೀಳನ್ನು ಕಡಿಮೆ ಮಾಡುವಲ್ಲಿ ಇದು ಯಶಸ್ವಿಯೂ ಆಗಿದ್ದಿದೆ.

ಎರಡು ರೀತಿಯ ದುರಭ್ಯಾಸಗಳು

ದ್ಯದ ಗೀಳಿರುವವರಿಗೂ ಇತರೆ ಮಾದಕ ದೃವ್ಯ ಸೇವನೆ ಮಾಡುವವರಿಗೆ ನೀಡಬೇಕಾದ ಚಿಕಿತ್ಸೆಯನ್ನೇ ನೀಡಬೇಕಾಗಬಹುದು. ಅಂದರೆ ಮಾನಸಿಕ ರೋಗ ಚಿಕಿತ್ಸಾ ಪದ್ದತಿಯನ್ನು ಸಹ ಇಲ್ಲಿ ಕಾಣಬಹುದಾಗಿದೆ. ಇದರಲ್ಲಿ ಬಹಳಷ್ಟು ಮದ್ಯದ ಗೀಳಿರುವವರು ಬೆಂಜೆಡೈಜೆಪೈನ್ ಅವಲಂಬನೆ ಹೊಂದಿರುತ್ತಾರೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಅಂದರೆ ಸುಮಾರು 10-20 ಶೇಕಡಾ ಜನರು ಬೆಂಜೆಡೈಜೆಪೈನ್ಸ್ ನ ಅವಲಂಬನೆ ಇಲ್ಲವೆ ಅದರ ದುರುಪಯೋಗದ ಸಮಸ್ಯೆಗಳಿಗೆ ಬಲಿಯಾಗುತ್ತಾರೆ. ಮೊದಲೇ ಅಲ್ಕೊಹಾಲ್  ತೀವ್ರತರವಾದ ಉತ್ತೇಜಕವಾದದ್ದು, ಹಾಗಿರುವಾಗ ಬಾರ್ಬಿಚ್ರೇಟ್ಸ್ಬೆಂಜೆಡೈಜೆಪೈನ್ಸ್, ಮತ್ತು ಬೆಂಜೆಡೈಜೆಪೈನ್ಸ್ ರಹಿತ ಔಷದಗಳು ಈ ದುರಭ್ಯಾಸದ ಉದ್ವಿಗ್ನತೆಗೆ ದಾರಿ ಮಾಡುಕೊಡುತ್ತವೆ. ಇನ್ನುಳಿದ ಮಾದಕ ವಸ್ತುಗಳಿಗೆ ವಾಲುವ ಸಂದರ್ಭಗಳೂ ಅಂದರೆ ಜೊಲ್ಪಿಡೆಮ್ ಮತ್ತು ಜೊಪಿಕ್ಲೊನ್ ಅಲ್ಲದೇ ಒಪಿಏಟ್ಸ್ ಮತ್ತು ಅನಧಿಕೃತ ಮಾದಕ ದೃವ್ಯಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅವಲಂಬನೆ ಮತ್ತು ಉದ್ವಿಗ್ನತೆಯನ್ನುಂಟು ಮಾಡುವ ಮಾದಕ ವಸ್ತುಗಳ (ಉದಾಹರಣೆಗೆ ಬೆಂಜೆಡೈಜೆಪೈನ್) ಹಿಂತೆಗೆತವು ಅಲ್ಕೊಹಾಲ್ ದುಷ್ಪರಿಣಾಮಕ್ಕೆ ಗುರಿಮಾಡುತ್ತದೆ. ಔಷದೋಪಚಾರಕ್ಕೆ ತೀವ್ರವಾಗಿ ಸಿಗದಿದ್ದರೆ ಮಾನಸಿಕ ಅಸ್ವಸ್ಥತೆಯ ಅಪಾಯವೂ ತಪ್ಪಿದ್ದಲ್ಲ. ಅಥವಾ ಇದನ್ನು ಸೂಕ್ತವಾಗಿ ನೋಡಿಕೊಳ್ಳದಿದ್ದರೆ ಸೆಳೆತದಂತಹ ಅಪಸ್ಮಾರ ರೋಗವೂ ಉಂಟಾಗಬಹುದು. ಬೆಂಜೆಡೈಜೆಪೈನ್ ಅವಲಂಬನೆಯಲ್ಲಿ ಇದರ ಕಾಳಜಿಪೂರ್ವಕ ಪ್ರಮಾಣವನ್ನು ಅನುಸರಿಸಬೇಕಾಗುತ್ತದೆ. ಯಾಕೆಂದರೆ ಬೆಂಜೆಡೈಜೆಪೈನ್ ನ ಅವಲಂಬನೆಯು ತನ್ನ ಲಕ್ಷಣ ತೋರಿಸುತ್ತದೆ. ಇದು ಆರೋಗ್ಯದಲ್ಲಿ  ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಲವಾರು ಬಾರಿ ಬೆಂಜೆಡೈಜೆಪೈನ್ ಗಳು ಮದ್ಯವ್ಯಸನಿಗಳನ್ನು ಮತ್ತೆ ಕುಡಿತಕ್ಕೆ ಎಳೆಯುವ ಸಂದರ್ಭಗಳನ್ನು ಕೂಲಂಕಷವಾಗಿ ಗಮನಿಸಬೇಕಾಗುತ್ತದೆ. ಈ ಬೆಂಜೆಡೈಜೆಪೈನ್ ಗಳು ಕುಡಿತದ ಸಮಸ್ಯೆ ಎದುರಿಸುವವರಲ್ಲಿ ಹೆಚ್ಚಿನ ಪ್ರಮಾಣದ ಮದ್ಯದ ಸೇವನೆಗೆ ಕಾರಣವಾಗಿ ಸಮಸ್ಯೆಯನ್ನುಂಟು ಮಾಡಬಹುದಾಗಿದೆ. ಸಾಮಾನ್ಯವಾಗಿ ಹಲವಾರು ದೇಶಗಳಲ್ಲಿ ಈ ರೋಗದ ಲಕ್ಷಣಗಳು ಹಾಗು ಏರುಪೇರುಗಳು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. "ಬಹುಮುಖ್ಯವಾದ ವಿಷಯ ಮದ್ಯದ ಗೀಳಿರುವವರನ್ನು ಚಿಕಿತ್ಸೆಗೆ ಸಜ್ಜುಗೊಳಿಸುವುದು ಒಂದು ಸಮಸ್ಯೆಯೇ  ಸರಿ." ಯುನೈಟೆಡ್ ಕಿಂಗ್ ಡಮ್ ನಲ್ಲಿ "ಅವಲಂಬಿತ ಕುಡಕರ" ಸಂಖ್ಯೆಯನ್ನು 2.8 ದಶಲಕ್ಷ ಎಂದು 2001ರಲ್ಲಿ ಅಂದಾಜಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವಾದ್ಯಂತ ಸುಮಾರು 140 ದಶಲಕ್ಷ ಜನರು ಮದ್ಯದ ಅವಲಂಬನೆಯ ಗೀಳಿನಿಂದ  ಬಳಲುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಪಶ್ಚಿಮ ಯುರೊಪ್ ನಲ್ಲಿ ಸುಮಾರು 10ರಿಂದ20 ಶೇಕಡಾ ಪುರುಷರು ಮತ್ತು ಶೇಕಡಾ 5ರಿಂದ 10ರಷ್ಟು ಮಹಿಳೆಯರು ಮದ್ಯದ ಗೀಳಿಗೆ ಬಲಿಯಾಗಿರುವ ಸಂಭವವಿದೆ.

ವೈದ್ಯಕೀಯ ಮತ್ತು ವೈಜ್ಞಾನಿಕ ವಲಯದಲ್ಲಿ ಮದ್ಯಪಾನದ ವಿಪರೀತತೆಯು ಒಂದು ಕಾಯಿಲೆಯಾಗಿ ಪರಿಗಣಿಸಲ್ಪಡುತ್ತದೆ. ಉದಾಹರಣೆಗಾಗಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಪ್ರಕಾರ ಮದ್ಯವೂ ಒಂದು ಮಾದಕ ದೃವ್ಯವೆನಿಸಿದೆ."ಇದರ ದುಶ್ಚಟವು ಅವ್ಯಾಹತವಾಗಿದ್ದು ಇದರಿಂದಾಗಿ ಸತತ ಸೇವನೆಯ ಗೀಳಿಗೆ ಕುಡುಕ ವ್ಯಕ್ತಿ ಬಲಿಯಾಗುತ್ತಾನೆ. ಇದು ಆತನ ಮೆದುಳು ಮತ್ತು ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಂತರ ವ್ಯಸನವಾಗಿ ಮಾರ್ಪಟ್ಟು ಜೈವಿಕ ಸಂವೇದನೆಗೆ ಒಳಗಾಗಿ ಸುತ್ತಲಿನ ಪರಿಸರದ ಮೇಲೂ ಪರಿಣಾಮವನ್ನುಂಟು ಮಾಡಬಲ್ಲುದು. ಉದಾಹರಣೆಗೆ: ಮೆದುಳಿನ ಪ್ರಬುದ್ದತೆಯ ಹಂತದಲ್ಲೊ ಇದು  ಕಾಣಬಹುದು.ಮದ್ಯದ ಚಟವು ಸಾಮಾನ್ಯವಾಗಿ ಪುರುಷರನ್ನೇ ಹೆಚ್ಚು ಆವರಿಸಿಕೊಳ್ಳುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಫಲವಾಗಿದೆ.

"ಅಲ್ಕೊಹಾಲಿಸಮ್ " ಎಂಬ ಶಬ್ದವನ್ನು ಸ್ವಿಡನ್ನಿನ ವೈದ್ಯ ಮ್ಯಾಗ್ನಸ್ ಹಸ್ ಮೊದಲ ಬಾರಿಗೆ ಪರಿಚಯಿಸಿದರು, ಕುಡಿತದ ದುಷ್ಪರಿಣಾಮಗಳನ್ನು ಸೂಕ್ತ ರೀತಿಯಲ್ಲಿ ವರ್ಣಿಸಲು ಅನುಕೂಲವಾಗುವಂತೆ ಅವರು ಇದನ್ನು ಹೆಸರಿಸಿದರು.

AA' ಯ ಮೂಲಭೂತ ಪಠ್ಯ "ಬಿಗ್ ಬುಕ್ " ನ ಪ್ರಕಾರ ಮದ್ಯದ ಗೀಳು ದೈಹಿಕ ಅಲರ್ಜಿ ಅಥವಾ ಅಹಿತಕರ ಲಕ್ಷಣ ಮತ್ತು ಮಾನಸಿಕ ಕಾಯಿಲೆಯಾಗಿ ಪರಿಗಣಿಸಲ್ಪಡುತ್ತದೆ. ಆದರೆ "ಅಲರ್ಜಿ" ಎಂಬುದು ಆಧುನಿಕ ವೈದ್ಯಶಾಸ್ತ್ರದಲ್ಲಿ ವ್ಯಾಖ್ಯಾನಿಸಿದಂತೆ ಇದರಲಿಲ್ಲ. ವೈದ್ಯ ಮತ್ತು ವ್ಯಸನದ ವಿಶೇಷಜ್ಞ ಡಾ.ವಿಲಿಯಮ್ ಡಿ ಸಿಲ್ಕವರ್ಥ ಎಂ.ಡಿ ಅವರ ಪ್ರಕಾರ AA ಪುಸ್ತದಲ್ಲಿ ವಿವರಿಸಿದಂತೆ ಮದ್ಯದ ಗೀಳು ಇರುವವರು ತಮ್ಮ ಚಟವನ್ನು ಮಾನಸಿಕ ನಿಯಂತ್ರಣ ಮೀರಿ ಅದಕ್ಕೆ ಈಡಾಗುತ್ತಾರೆ.

ಸುಮಾರು 1960 ರಲ್ಲಿ  ಮಾರ್ಟೊನ್ ಜೆಲ್ಲಿನೆಕ್ ಅವರು ಆಧುನಿಕ ಅಲ್ಕೊಹಾಲಿಸಮ್ ನ ರೋಗದ ಮೂಲವನ್ನು ಪ್ರಸ್ತುತಪಡಿಸಿದರು. ಜೆಲ್ಲಿನಿಕ್ ನ ಈ ಅಧ್ಯಯನವು "ಅಲ್ಕೊಹಾಲಿಸಮ್ "ಅಥವಾ ಮದ್ಯದ ಗೀಳಿಗೆ ವ್ಯಕ್ತಿ ತೋರುವ ವಿಶೇಷತೆಯನ್ನು ಆತ ವಿವರಿಸಿದ್ದಾನೆ. ಆವಾಗಿನಿಂದ ಮದ್ಯದ ಗೀಳಿನ ವ್ಯಾಖ್ಯಾನವು ಮೇಲಿಂದ ಮೇಲೆ ಬದಲಾವಣೆ ಹೊಂದುತ್ತಾ ಬಂದಿದ್ದು ಗೋಚರವಾಗುತ್ತದೆ. ದಿ ಅಮೆರಿಕನ್ ಮೆಡಿಕಲ್ ಅಸೋಶಿಯೇಶನ್ ಇತ್ತೀಚಿಗೆ ಅಲ್ಕೊಹಾಲಿಸಮ್ ನ್ನು ಮೂಲಭೂತ ಸಾಂಕ್ರಾಮಿಕ ಪ್ರಾಥಮಿಕ ಕಾಯಿಲೆಗೆ ಹೋಲಿಸಿದೆ.

ಒಂದು ಅಲ್ಪಸಂಖ್ಯಾತ ವರ್ಗದ ವಲಯದ ಹರ್ಬೆರ್ಟ್ ಫಿಂಗಾರೆಟ್ಟೆ ಮತ್ತು ಸ್ಟಾಂಟೊನ್ ಪೀಲೆ ಅವರ ಪ್ರಕಾರ  ಮದ್ಯದ ಗೀಳು ಅಂಟಿಸಿಕೊಂಡವರು ಇದನ್ನು ಕಾಯಿಲೆಯೆಂದೇ ಗುರುತಿಸಿಕೊಳ್ಳುತ್ತಾರೆ. ಈ ಕಾಯಿಲೆಯ ನಮೂನೆಯನ್ನು ಟೀಕಿಸುವವರು "ವಿಪರೀತ ಕುಡಿತ" ಎಂದು ಅಲ್ಕೊಹಾಲ್ ನ ದುಷ್ಪರಿಣಾಮಗಳನ್ನು ಹೇಳುವಾಗ ವಿವರಿಸುತ್ತಾರೆ.

 

ಸಮಾಜ ಮತ್ತು ಸಂಸ್ಕೃತಿ

ದ್ಯದ ವಿಪರೀತ ಗೀಳಿನಿಂದಾಗುವ ಹಲವಾರು ವ್ಯತಿರಿಕ್ತ ಪರಿಣಾಮಗಳು ಆತನನ್ನು ಸಾಮಾಜಿಕವಾಗಿ ಹಿನ್ನಡೆಗೆ ನೂಕುತ್ತವೆ. ಇದರಿಂದ ಆರ್ಥಿಕವಾಗಿಯೂ ಮತ್ತು ಕೆಲಸದ ಅವಧಿಯೂ ನಷ್ಟ, ಹಣಕಾಸಿನ ಹಾನಿ ಹಾಗು ವೈದ್ಯಕೀಯ ವೆಚ್ಚ ಇತ್ಯಾದಿ ಚಿಕಿತ್ಸಾ ವೆಚ್ಚಗಳು ಉಂಟಾಗುತ್ತವೆ. ಮದ್ಯದ ಬಳಕೆಯು ತಲೆಗುಂಟಾಗುವ ಗಾಯಗಳಿಗೆ ಹೆಚ್ಚಿನ ಕಾರಣವಾಗುತ್ತದೆ.  ವಾಹನ ಅಪಘಾತಗಳು, ಹಿಂಸಾಚಾರ ಮತ್ತು ಹಲ್ಲೆಗಳು ಇದರ ವ್ಯತಿರಿಕ್ತ ಪರಿಣಾಮಗಳಾಗಿವೆ. ಹಣಕಾಸಿನ  ಹಾನಿಯನ್ನೂ ಮೀರಿ ನೋವು ಮತ್ತು ಪ್ರಯಾಸವನ್ನೂ ಎದುರಿಸಬೇಕಾಗುತ್ತದೆ. ಉದಾಹರಣೆಗೆ ಗರ್ಭಿಣಿಯೊಬ್ಬಳ ಮದ್ಯದ ಗೀಳು ಆಕೆಯ ಗರ್ಭದಲ್ಲಿರುವ ಎಳೆ ಕಂದಮ್ಮನಲ್ಲಿ ಮದ್ಯದ ಗೀಳಿನ ಲಕ್ಷಣವನ್ನು ತೋರಬಹುದು.ಇದು ತೀವ್ರತರ ಹಾನಿ ತಲುಪಿಸುವ ಸಾಧ್ಯತೆ ಇದೆ.ಸಾಮಾನ್ಯವಾಗಿ ಒಂದೇ ಸ್ವರೂಪಗಳ ಮದ್ಯದ ಗೀಳಿನವರು ಅಲ್ಲಲ್ಲಿ ಕಾಲ್ಪನಿಕ ಕಥೆ ಮತ್ತು ಜನಪ್ರಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಂಡು ಬರುವುದು ಸಹಜವಾಗಿದೆ.  ದಿ ಟೌನ್ ಡ್ರಂಕ್ ಕೂಡಾ ಸ್ಟಾಕ್ ಕ್ಯಾರೆಕ್ಟರ್ ನ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಕಾಣುತ್ತದೆ.ಒಂದೇ ಸ್ವರೂಪದ ಕುಡಿತವು ಅಲ್ಲಿನ ಜನಾಂಗೀಯ ತತ್ವ ಅಥವಾ ಅಲ್ಲಿನ ಭಯಭೀತಿಯ ವಾತಾವರಣವು ಅಂದರೆ ಸುಮಾರು ಐರಿಶ್ ಜನರಲ್ಲಿ ಇಂತಹ ಲಕ್ಷಣಗಳು ಕಾಣಬರುತ್ತವೆ. ಇವರು ಆತ್ಯಧಿಕ ಕುಡಿತದ ಗೀಳಿಗೆ ಅಂಟಿಕೊಂಡವರಾಗಿದ್ದಾರೆ.ಸಾಮಾಜಿಕ ಮನ:ಶಾಸ್ತ್ರಜ್ಞರಾದ ಸ್ಟೈವರ್ಸ್ ಮತ್ತು ಗ್ರೀಲಿ ಅವರ ಪ್ರಕಾರ ಅತಿ ಹೆಚ್ಚು ಮದ್ಯದ ಗೀಳಿರುವವರಲ್ಲಿ ಐರಿಶ್ ಮತ್ತು ಅಮೆರಿಕನ್ ರು  ದಾಖಲೆಯನ್ನು ಮಾಡಿದ್ದಾರೆ.

 

ಚಲನಚಿತ್ರ ಮತ್ತು ಸಾಹಿತ್ಯದಲ್ಲಿ

ಇಂದಿನ ಆಧುನಿಕ ಯುಗದಲ್ಲಿ ಮದ್ಯದ ಗೀಳು ಬಿಡಿಸುವಲ್ಲಿ ಮತ್ತು ಅದರ ಮೂಲಬೇರುಗಳನ್ನು ಸಮಸ್ಯೆಗಳನ್ನು ಪ್ರದರ್ಶಿಸಲು. ಬರಹಗಾರರಾದ ಚಾರ್ಲೆಸ್ ಆರ್.ಜಾಕ್ಸನ್ ಮತ್ತು ಚಾರ್ಲೆಸ್ ಬುಕೊಸ್ಕಿ ಅವರು ತಮ್ಮ ಸ್ವಂತ ಅನುಭವವನ್ನು ಆಧರಿಸಿ ತಮ್ಮ ಮದ್ಯದ ಗೀಳನ್ನು ವಿವರಿಸಿದ್ದಾರೆ. ಪ್ಯಾಟ್ರಿಕ್ ಹ್ಯಾಮಿಲ್ಟನ್ ರ, ಹ್ಯಾಂಗೊವರ್ ಸ್ಕೆಯರ್ ಬರಹವು ಮದ್ಯದ ಗೀಳಿನ ಕೇಂದ್ರ ಲಕ್ಷಣದ ಪ್ರತಿಬಿಂಬವನ್ನು ತಿಳಿಸುತ್ತದೆ. ಒಂದು ಪ್ರಸಿದ್ದ ಕಾದಂಬರಿಯಲ್ಲಿ ಮದ್ಯದ ಗೀಳಿನ ಬಗ್ಗೆ ಮತ್ತು ಅದರ ಮಾನಸಿಕ ಪರಿಣಾಮಗಳ ವಿವರ ಒದಗಿಸಲಾಗಿದೆ. ಮಾಲ್ಕೊಲ್ಮ್ ಲೌರಿಯ ಜನಪ್ರಿಯ ಕಾದಂಬರಿ ಅಂಡರ್ ದಿ ವಾಲ್ಕನೊದಲ್ಲಿ ಬ್ರಿಟಿಶ್ಕೌನ್ಮಲ್ಸ್ ಜಾಫ್ರಿ ಫರ್ಮಿನ್ ರ ಸಾವಿನ ದಿನದಂದಿನ ವಿಷಯ ಬಂದಾಗ ಆತ ತನ್ನ ಪ್ರೀತಿಯ ಮಡದಿಗಿಂತ ಹೆಚ್ಚಾಗಿ ಮದ್ಯದ ಗೀಳನ್ನೇ ಆಯ್ಕೆ ಮಾಡಿಕೊಳ್ಳುವುದು ಕಂಡು ಬರುತ್ತದೆ.

ಚಲನಚಿತ್ರಗಳಾದ ಬ್ಯಾಡ್ ಸಾಂಟಾ ,ಬಾರ್ಫ್ಲಿ , ಡೇಸ್ ಆಫ್ ವೈನ್ ಅಂಡ್ ರೋಜಸ್ , ಐರನ್ ವೀಡ್ ,     ಮೈ ನೇಮ್ ಈಸ್ ಬಿಲ್ ಡಬ್ಲ್ಯು. , ವಿತ್ ನೇಲ್ ಅಂಡ್ ಐ, ಆರ್ಥರ್ , ಲೀವಿಂಗ್ ಲಾಸ್ ವೇಗಾಸ್ , ವೈ ಎ ಮ್ಯಾನ್ ಲೌವ್ಸ್ ಎ ಉಮನ್ , ಶಾಟರ್ಡ್ ಸ್ಪಿರಿಟ್ಸ್ ,ಮತ್ತು  ದಿ ಲಾಸ್ಟ್ ವೀಕ್ ಎಂಡ್ , ಹೀಗೆ ಅಲ್ಕೊಹಾಲ್ ಬಗೆಗಿನ ಒಂದೇ ತೆರನಾದ ಕಥಾನಕಗಳು ಹುಟ್ಟಿಕೊಳ್ಳುತ್ತವೆ.

ಮಹಿಳೆ ಮತ್ತು ಮದ್ಯದ ಗೀಳು

ಜೈವಿಕ ವ್ಯತ್ಯಾಸ ಮತ್ತು ದೈಹಿಕ ಪರಿಣಾಮಗಳು

ಜೀವಶಾಸ್ತ್ರೀಯವಾಗಿ ನೋಡಿದರೆ ಮಹಿಳೆಯರು ಮದ್ಯದ ಗೀಳಿನ ಲಕ್ಷಣಗಳಿಗೆ ಒಳಗಾಗುವ ಪ್ರಮೇಯವು ಅವರ ಮದ್ಯಪಾನದ ಅಭ್ಯಾಸವನ್ನು ಅವಲಂಬಿಸಿರುತ್ತದೆ. ಇಂತಹ ಸಂದರ್ಭಗಳಲ್ಲಿ  ಪುರುಷರ ಗೀಳು ಒಂದು ಮಹತ್ವದ ತಿರುವನ್ನೂ ಪಡೆಯುವ ಸಾಧ್ಯತೆ ಇರುತ್ತದೆ. ಅವರು ದೂರದೃಷ್ಟಿಯ ಕೋನದಲ್ಲಿ ಇದರ ಭೌತಿಕ ಪರಿಣಾಮಗಳಿಗೆ ತುತ್ತಾಗುತ್ತಾರೆ. ಮದ್ಯವು ಕಾಣದಂತೆ ದೂರವಾಗಿದ್ದರೂ ಅದರ ಚಟಕ್ಕೆ ಬಲಿಯಾಗುವ ಲಕ್ಷಣಗಳನ್ನು ಜೈವಿಕಶಾಸ್ತ್ರದಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಸಮ ಪ್ರಮಾಣದ ಮದ್ಯವನ್ನು ಪುರುಷರು ಮತ್ತು ಮಹಿಳೆಯರು ಸೇವಿಸಿದರೆ ಅತಿಹೆಚ್ಚು ಅಲ್ಕೊಹಾಲ್ ಮಹಿಳೆಯರ ರಕ್ತದಲ್ಲಿ  ಕಂಡು ಬರುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ.ಯಾಕೆಂದರೆ ಮಹಿಳೆಯರ ಶರೀರದಲ್ಲಿ ಪುರುಷರಿಗಿಂತ ಕಡಿಮೆ ನೀರಿನಾಂಶ ಇರುವುದೂ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಒಂದು ಸಮ ಪ್ರಮಾಣದ ಮದ್ಯವು ಮಹಿಳೆಯರ ದೇಹದಲ್ಲಿ ಅಧಿಕವಾಗಿ ಸಂಗ್ರಹವಾಗುವುದು ಕಾಣಬರುತ್ತದೆ. ಇದರಿಂದಾಗಿ ಮಹಿಳೆಯ ದೇಹವು ಅತಿ ಹೆಚ್ಚು ವಿಷಪೂರಿತವಾಗುವ ಸಾಧ್ಯತೆ ಇದೆ. ಇದಕ್ಕೆ ಇದೇ ಸಂದರ್ಭದಲ್ಲಿ ಬೇರೆ ಬೇರೆ ಹಾರ್ಮೊನ್ ಗಳ ಬಿಡುಗಡೆಯೇ  ಕಾರಣವಾಗಿದೆ.

ಹೀಗಾಗಿ ಮಹಿಳೆಯರು ಮದ್ಯಪಾನದಿಂದ ಸುದೀರ್ಘಕಾಲದ ಅಸ್ಥವ್ಯಸ್ತತೆಯನ್ನು ಪುರುಷರಿಗಿಂತ ಹೆಚ್ಚು ಕಾಣುವುದು ಸಹಜವೆನಿಸಿದೆ. ಇದರಿಂದಲೇ ಮದ್ಯದ ಗೀಳು ಇರುವ ಮಹಿಳೆಯರಲ್ಲಿ ಮದ್ಯದ ಗೀಳಿನ ಪುರುಷರಿಗಿಂತ ಹೆಚ್ಚು ಪ್ರಮಾಣದ ಸಾವಿನ ಪ್ರಮಾಣ ಕಂಡುಬರುತ್ತದೆ. ಉದಾಹರಣೆಗಾಗಿ ಸುದೀರ್ಘ ದುಷ್ಪರಿಣಾಮಗಳೆಂದರೆ ಮೆದುಳು, ಹೃದಯ ಮತ್ತು ಜಠರ ಹಾನಿ ಅದಲ್ಲದೇ ಸ್ತನ ಕ್ಯಾನ್ಸರ್ ಕೂಡಾ ಇನ್ನೊಂದು ಸಮಸ್ಯೆಯಾಗಿ ಕಾಡುತ್ತದೆ. ಮಹಿಳೆಯರಲ್ಲಿನ ವಿಪರೀತ ಕುಡಿತವು ಅವರ ಸಂತಾನಶಕ್ತಿಯ ಬಗ್ಗೆಯೂ ಋಣಾತ್ಮಕ ಪರಿಣಾಮಕ್ಕೆ  ಕಾರಣವಾಗಬಹುದು. ಇದರಿಂದಾಗಿ ಮಹಿಳೆಯರ ಸಹಜ ಕ್ರಿಯೆಗಳು ಅನಿಯಮಿತಗೊಳ್ಳುವುದಲ್ಲದೇ ಅಂಡಾಂಶದ ಮೊಟ್ಟೆಗಳ ಸಂಖೆಯಲ್ಲಿ ಏರಿಳಿತ, ಅನಿಯಮಿತ ಋತುಚಕ್ರ, ರಕ್ತಹೀನತೆ, ದೇಹದ ಜೀರ್ಣಾಂಗ ವ್ಯೂಹದ ಕಾರ್ಯಕ್ಕೆ ಅಡತಡೆಯೂ ಮದ್ಯದ ಗೀಳಿನಿಂದಾಗಿ ಅಧಿಕಗೊಳ್ಳುವ ಸಾಧ್ಯತೆ ಇದೆ.

ಮಹಿಳೆಯರ ಶಾರೀರಿಕ ಮತ್ತು ಭಾವಾನಾತ್ಮಕ ಪರಿಣಾಮಗಳು

ದ್ಯದ ಗೀಳಿರುವ ಮಹಿಳೆಯರು ಸಾಮಾನ್ಯವಾಗಿ ಅಸಹಜ ಶಾರೀರಿಕ ಅವ್ಯವಸ್ಥೆಗಳಿಗೆ ಗುರಿಯಾಗುತ್ತಾರೆ. ಇಂತಹ ದೈಹಿಕ ಅಸಮಾನತೆಗಳು ಮಹಿಳೆಯರು ಮತ್ತು ಪುರುಷರಲ್ಲಿ ಒಂದೇ ತೆರನಾಗಿ ಇರುತ್ತದೆ. ಮದ್ಯದ ಗೀಳಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಖಿನ್ನತೆ, ಆತಂಕ, ಗಾಬರಿ ಲಕ್ಷಣ, ಅತಿಹಸಿವಿನ ರೋಗ, ಸಾವು ಬದುಕಿನ ಅಂಚಿನಲ್ಲಿನ ಹೋರಾಟ ಇತ್ಯಾದಿ ಪ್ರಮುಖ ದುಷ್ಪರಿಣಾಮಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಪುರುಷರಲ್ಲಿ ಸಮರೂಪದಲ್ಲೇ ದೈಹಿಕ ಅಸ್ತವ್ಯಸ್ತತೆಗಳು ಕಂಡರೂ ಬಹುತೇಕ ಸ್ವಪ್ರತಿಷ್ಟೆ ಮತ್ತು ಸಮಾಜವಿರೋಧಿ ವ್ಯಕ್ತಿತ್ವದ ಅಸ್ತವ್ಯಸ್ತತೆ, ದೈಹಿಕ ದಣಿವು, ಅಪಸ್ಮಾರ, ನರಗಳ ದುರ್ಬಲತೆ ಮತ್ತು ಗಮನದ ಕೊರತೆ ಅಥವಾ ಅತಿಹೆಚ್ಚಿನ ಚಟುವಟಿಕೆ ಇತ್ಯಾದಿಗಳನ್ನು ಕಾಣಬಹುದು. ಸರ್ವೆಸಾಮಾನ್ಯವಾಗಿ ಮದ್ಯದ ಗೀಳಿರುವ ಮಹಿಳೆಯರು ಹಿಂಸಾಕೃತ್ಯಗಳಿಗೆ ಈಡಾಗುತ್ತಾರೆ, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳಕ್ಕೆ ಬಲಿಯಾಗುವ ಸಾಧ್ಯತೆ  ಹೆಚ್ಚು. ಇಂತಹ ಪ್ರಸಂಗಗಳಲ್ಲಿ ಅತಿಹೆಚ್ಚು ಪ್ರಕರಣಗಳಲ್ಲಿ, ಖಿನ್ನತೆ, ಆತಂಕ ಮತ್ತು ಅಧಿಕ ಮದ್ಯದ ಮೇಲಿನ ಅವಲಂಬನೆ ಇತ್ಯಾದಿ ಹೆಚ್ಚಾಗುತ್ತವೆ.

ಚಿಕಿತ್ಸೆಗಾಗಿ ಸಾಮಾಜಿಕ ನಿರ್ಭಂದಗಳು

ಸಾಮಾಜಿಕ ಸಮರೂಪದ ವ್ಯವಸ್ಥೆಗಳಲ್ಲಿ ಮಹಿಳೆಯರು ಮತ್ತು ಮದ್ಯ ಹಾಗು ಅದರ ಪತ್ತೆಗೆ ಹೆಚ್ಚು ಗಮನ ನೀಡುವುದು ಸಾಧ್ಯವಾಗುದಿಲ್ಲ. ಹೀಗಾಗಿ ಮದ್ಯದ ಗೀಳಿಗೆ ಒಳಗಾಗಿರುವ ಮಹಿಳೆಯರು "ಸಾಮಾನ್ಯವಾಗಿ ಲೈಗಿಕವಾಗಿ ಮತ್ತು ನೈತಿಕವಾಗಿ ಬಿದ್ದು ಹೋದವರು"  ಎಂಬ ಅಪವಾದಕ್ಕೆ ಗುರಿಯಾಗುತ್ತಾರೆ. ಇಂತಹ ಕಳಂಕವು ಮಹಿಳೆಯರಿಗೆ ತಮ್ಮ ಕುಡಿತದ ಗೀಳನ್ನು ಹೇಳಿಕೊಳ್ಳಲು ಮತ್ತು ಔಷಧೋಪಚಾರ ಮಾಡಿಕೊಳ್ಳಲು ಸಹ ಹಿಂಜರಿಕೆ ಮೂಡಿಸುತ್ತದೆ . ಇದರಿಂದಾಗಿ ಕುಟುಂಬದ ವೈದ್ಯರು ಸಹ ಇಂಥ ಮದ್ಯದ ಗೀಳಿರುವ ಮಹಿಳೆಯರ ಬಗೆಗಿನ ಸಂಶಯಗಳಿಗೆ ಹಿಂದೇಟು  ಹಾಕುತ್ತಾರೆ.

ಇದಕ್ಕೆ ತದ್ವಿರುದ್ದವಾಗಿ ಪುರುಷರಲ್ಲಿ ಮದ್ಯದ ಗೀಳಿನ ಚಿಕಿತ್ಸೆಗೆ ಸಾಮಾಜಿಕವಾಗಿ ನಿರ್ಭಂಧನೆಗಳಿದ್ದರೂ ಅವರು ತಮ್ಮ ಗೀಳನ್ನು ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಾರೆ. "ಇಂತಹ ದುರಭ್ಯಾಸಗಳು ಗಂಡಸರಲ್ಲಿದ್ದರೆ  ಅವರು "ನೈತಿಕವಾಗಿ ಉತ್ತಮ" ರೆಂದು ಅವರು ದೊಡ್ದವರೆಂದು ಪರಿಗಣಿತರಾಗುತ್ತಾರೆ. ಕಳಂಕದ ಕಡಿಮೆ ಭೀತಿಯಿಂದ ಪುರುಷರು ವೈದ್ಯಕೀಯ ಪರಿಸ್ಥಿತಿಗಳನ್ನು ಎದುರಿಸುತ್ತಾರಲ್ಲದೇ ಸಾಮಾನ್ಯವಾಗಿ ಕುಡಿತವನ್ನು ಸಾಮೂಹಿಕವಾಗಿಯೂ ಅವರು ಮಾಡುತ್ತಾರಾದ್ದರಿಂದ ಚಿಕಿತ್ಸೆಗಾಗಿಯೂ ಮುಂದಾಗಿದ್ದಾರೆ. ಈ ಪ್ರಕರಣವು ಪುರುಷರಲ್ಲಿ ಸಾಮಾನ್ಯವಾಗಿ ಕುಟುಂಬ ವೈದ್ಯರು ಇವನ್ನು ಸಹಜವಾಗಿ ಪರಿಗಣಿಸಿ ತಮಗೆ ಪರಿಚಿತ ವ್ಯಕ್ತಿಗಳಿಗೆ ಅನುಕೂಲ ಮಾಡಲು ಮುಂದಾಗುತ್ತಾರೆ. ಇಂತಹ ವಿಷಯಗಳಲ್ಲಿ ಮಹಿಳೆಯರು ಕೂಡಾ ಸಾಮಾಜಿಕ ಕಳಂಕದ ಬಗ್ಗೆ ಆಕೆ ವಿಚಾರ ಮಾಡಬೇಕಾಗುತ್ತದೆ.ಇಲ್ಲಿ ಆಕೆಯ ಕೌಟುಂಬಿಕ ವಿಷಯಗಳಲ್ಲಿ ತನ್ನ ಗೌರವಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಇದು ನೆರವು ಕೇಳುವವರನ್ನು  ದೂರವಿಡುತ್ತದೆ.

ಚಿಕಿತ್ಸಾ ಉಪಾಯಗಳು

ಮದ್ಯದ ಗೀಳು ಇರುವವರನ್ನು  ಸುಧಾರಿಸಲು ವೃತ್ತಿಪರರು ಇಂತಹ ಸಮಸ್ಯಾತ್ಮಕ ಅಲ್ಕೊಹಾಲ್ ಪ್ರಕರಣಗಳಲ್ಲಿ  ಬಹುಮುಖ್ಯವಾಗಿ ಮಹಿಳೆಯರಿಗಾಗಿ ಹೆಚ್ಚು ಗಮನ ನೀಡಬೇಕಾಗುತ್ತದೆ. ಮದ್ಯಸಾರ ಉಪಯೋಗಿಸುವವರ ಆರೋಗ್ಯದ ಏರುಪೇರುಗಳನ್ನು ಪರಿಗಣಿಸಿ. ಲಿಂಗ ತಾರತಮ್ಯಗಳಿಗೆ ಅವಕಾಶ ಕೊಡದೆ ಕಾರ್ಯಪ್ರವೃತ್ತರಾದರೆ ಇದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವೃತ್ತಿಪರರಿಗೆ ಇದರ ಅರಿವು ಇರಬೇಕಾಗುತ್ತದೆ. ಇದಕ್ಕೆ ಬಲಿಯಾಗುವವರ ಮೇಲೆ ಸಾಧ್ಯವಾದಷ್ಟು ಅನುಕಂಪವನ್ನು ತೋರಿಸಬೇಕಾಗುತ್ತದೆ. ಮದ್ಯದ ಗೀಳು ಹೊಂದಿರುವವರಿಗೆ ಯಾವುದೇ ಲಿಂಗ ಭೇದವಿಲ್ಲದೇ ಉತ್ತಮ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಕುಡಿತದ ಚಟ ಬಿಡಿಸುವ ಸಂಘಸಂಸ್ಥೆಗಳು ಆದ್ಯತೆ ಮೇರೆಗೆ ಗುಣಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗುತ್ತದೆ. ಆರಂಭಿಕ ಪತ್ತೆಹಚ್ಚುವಿಕೆಯು ಪುನ:ಶ್ಚೇತನದ ಅವಕಾಶಗಳನ್ನು ಹೆಚ್ಚಿಸುತ್ತದೆ