Friday, October 26, 2012

12, ಹೆಜ್ಜೆಗಳು


ಎ.ಎ. ಯ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಪಾಲಿಸಿ, ಚೇತರಿಸದೆ ಇರುವವರು ನಮಗೆ ನೋಡಲು ಸಿಗುವುದು ತೀರಾ ವಿರಳ. ಅಂತಹವರು ಈ ಸರಳ ಕಾರ್ಯಕ್ರಮವನ್ನು ಸ್ವೀಕರಿಸಲು ಶಕ್ತರಾಗಿರುವುದಿಲ್ಲ, ಅಥವಾ ಸ್ವೀಕರಿಸಿರುವುದಿಲ್ಲ. ಸಾಮಾನ್ಯವಾಗಿ ಅಂತಹ ಸ್ತ್ರೀ ಅಥವಾ ಪುರುಷರು, ತಮ್ಮ ದೇಹರಚನೆಗೆ  ಅನುಗುಣವಾಗಿ ತಮಗೆ ತಾವೇ ಪ್ರಾಮಾಣಿಕತೆಯಿಂದ  ನಡೆದುಕೊಳ್ಳುವುದಿಲ್ಲ. ಅಂತಹ ದುರ್ದೈವಿಗಳೂ ಇರುತ್ತಾರೆ. ಅವರನ್ನು ತಪ್ಪಿತಸ್ತರೆಂದು ಹೇಳಲಾಗುವುದಿಲ್ಲ, ಅವರು ಅದೇ ರೀತಿ ಹುಟ್ಟಿರಬಹುದು. ಕಠಿಣ ಪ್ರಾಮಾಣಿಕತೆಯ ಅಗತ್ಯವಿರುವ ಜೀವನವನ್ನು ಗ್ರಹಿಸಲು ಹಾಗೂ ವೃದ್ದಿಪಡಿಸಲು ಅವರು ಸ್ವಭಾವದಿಂದಲೇ ಆಶಕ್ತರಾಗಿರುತ್ತಾರೆ. ಅಂತಹವರು  ಚೇತರಿಸುವ ಸಂದರ್ಭಗಳು ತೀರಾ ಕಡಿಮೆ, ಗಂಬೀರ ಆವೇಗ ಮತ್ತು ಮಾನಸಿಕ "ಅವ್ಯವ್ಯಸ್ತೆಗಳಿಗೆ" ಒಳಗಾದವರೂ ಅವರಲ್ಲಿ ಕೆಲವರಾಗಿರುತ್ತಾರೆ. ಆದರೆ ಅವರಲ್ಲೂ ಅನೇಕರು ಪ್ರಾಮಾಣಿಕತೆಯ ಯೋಗ್ಯತೆಯನ್ನು ಪಡೆದರೆ ಖಂಡಿತವಾಗಿ ಚೆತರಿಸುತ್ತಾರೆ.

 ನಾವು ಹೇಗಿದ್ದೆವು ಹೇಗಾಗಬಹುದಾಗಿತ್ತು ಹೇಗಾದೆವು ಯಾಕಾದೆವು ಏನಾಯಿತು ಮತ್ತು ಈಗ ಹೇಗಿದ್ದೇವೆ ಹೇಗಿದ್ದೇವೋ ಹಾಗೆಯೇ ಮುಂದುವರಿದಿದ್ದರೆ ಏನಾಗಿರುತ್ತಿದ್ದೆವು ? ಎಂಬ ಸರ್ವ ಸಾದಾರಣ ಪ್ರಶ್ನೆಗಳನ್ನು ನಮ್ಮಲ್ಲಿ ನಾವು ಕೇಳಿಕೊಂಡರೆ,  ನಮ್ಮ ಕಥೆಗಳೇ ತೋರಿಸಿಕೊಡುತ್ತವೆ ನಮ್ಮಲ್ಲಿ ಏನುಂಟು ಎಂದು.   ನಮ್ಮಲ್ಲಿ ಏನು ಇದೆಯೋ ಅದನ್ನು ಮರಳಿ ಪಡೆಯಬೇಕೆಂಬ ನಿರ್ಣಯವನ್ನು ನೀವು ಮಾಡುವಿರಾದರೆ, ಮತ್ತು ಅದನ್ನು ಪಡೆಯಲು ಏನು ಬೇಕಾದರೂ ಮಾಡಲು ಸಿದ್ದರಿರುವಿರಾದರೆ. ನೀವು ಕೆಲವು ಹೆಜ್ಜೆಗಳನ್ನು ಅನುಸರಿಸಲು ಸಿದ್ದರಾಗಿದ್ದೀರಿ, ಎಂದು ಅರ್ಥವಾಗುತ್ತದೆ. ಹಾಗಾದಾರೆ ಇಲ್ಲಿವೆ ನೋಡಿ ನಾವು ಅನುಸರಿಸಿದ ಹೆಜ್ಜೆಗಳು ಇಲ್ಲಿವೆ ಚೇತರಿಕೆಯ ಕಾರ್ಯಕ್ರಮದಲ್ಲಿ ಎ ಎ ಯು ಇವುಗಳನ್ನು ಪಾಲಿಸಲು ಸಲಹೆ ಕೊಡುತ್ತದೆ .

 12, ಹೆಜ್ಜೆಗಳು ಹ ,ಹಾ ,! ಅದು ಹೇಗೆ ಕೆಲಸಮಾಡುತ್ತದೆ ?
1.   ಮದ್ಯದೆದುರು ನಾವು ಬಲಹೀನರಾಗಿದ್ದೆವೆಂದು, ಮತ್ತು ನಮ್ಮ ಜೀವನವು ನಿರ್ವಹಿಸಲಾರದಾಗಿತ್ತೆಂದು ಒಪ್ಪಿಕೊಂಡೆವು.
2.   ನಮಗಿಂತಲೂ ಮಿಗಿಲಾದ ಒಂದು ಶಕ್ತಿಯು, ನಮ್ಮನ್ನು ಮನಸ್ವಾಸ್ತ್ಯದಲ್ಲಿ  ಪುನರ್ನೆಲೆಗೊಳಿಸಬಲ್ಲದೆಂದು ನಂಬಿದೆವು .
3.   ನಾವು ಅರ್ಥಮಾಡಿಕೊಂಡಂತಹ ಭಗವಂತನ ರಕ್ಷೆಗೆ, ನಮ್ಮ ಸಂಕಲ್ಪ ಮತ್ತು ಜೀವನವನ್ನು ಹೊರಳಿಸಲು ನಿರ್ಧರಿಸಿದೆವು .
4.   ಶೋದನಾತ್ಮಕ ಮತ್ತು ಭಯರಹಿತವಾದ, ನಮ್ಮ ನೈತಿಕ ಯಾಧಿಯನ್ನು ಮಾಡಿದೆವು .
5.   ಭಗವಂಥನಿಗೆ ನಮಗೆ ನಾವೇ ಮತ್ತು ಮತ್ತೊಬ್ಬ ಮಾನವ ವ್ಯಕ್ತಿಗೆ, ನಮ್ಮ ನೈಜ ಸ್ವಾಭಾವದ ತಪ್ಪುಗಳನ್ನು ಒಪ್ಪಿಸಿದೆವು .
6.   ನಮ್ಮ ಈ ಎಲ್ಲಾ ನಡತೆಯ ನ್ಯೂನ್ಯತೆಗಳನ್ನು, ದೇವರು ನಿವಾರಿಸಲನುವಾಗುವಂತೆ ಪೂರ್ಣ ಸಿದ್ದರಾದೆವು .
7.   ನಮ್ಮ ಎಲ್ಲಾ ಕೊರಥೆಗಳನ್ನು ನಿವಾರಿಸುವಂತೆ, ಭಗವಂಥನನ್ನು ದೈನ್ಯದಿಂದ ಕೇಳಿಕೊಂಡೆವು .
8.   ನಾವು ಹಾನಿಪಡಿಸಿದ ಎಲ್ಲಾ ವ್ಯಕ್ತಿಗಳ ಯಾಧಿಯನ್ನು ಮಾಡಿದೆವು, ಮತ್ತು ಆ ಎಲ್ಲರೊಂದಿಗೆ ತಪ್ಪೊಪ್ಪಿಕೊಳ್ಳಲು ಇಚ್ಚಿಸಿದೆವು .
9.   ಅವರಿಗೆ ಅಥವಾ ಇತರರಿಗೆ ಘಾಸಿಯಾಗುವ ಸಂಧರ್ಭಗಳನ್ನುಳಿದು, ಸಾದ್ಯವಿದ್ದಾಗ ಅಂತಹ ವ್ಯಕ್ತಿಗಳೊಡನೆ,ನೇರವಾಗಿ ತಪ್ಪೋಪ್ಪಿಕೊಂಡೆವು.
10.         ವ್ಯಕ್ತಿಗತ ಶೋಧನೆ ಮಾಡುವುದನ್ನು ಮುಂದುವೊರೆಸಿದೆವು, ಮತ್ತು ನಾವು ತಪ್ಪಿದಾಗ, ಒಡನೇ ತಪ್ಪೋಪ್ಪಿಕೊಂಡೆವು .
11.         ನಾವು ಅರ್ಥಮಾಡಿಕೊಂಡಂಥಹ ಭಗವಂಥನೊಡನೆ, ಪ್ರಾರ್ಥನೆ ಮತ್ತು ದ್ಯಾನಧ ಮೂಲಕ, ನಮ್ಮ ಪ್ರಜ್ಞಾಪೂರ್ವಕ ಸಂಪರ್ಕವನ್ನು ವೃದ್ದಿಪಡಿಸುವಂತೆ, ಕೋರುತ್ತಾ ನಮಗಾಗಿ ಅವನ ಇಚ್ಚೆಯ ಜ್ಞಾನಕ್ಕೆ ಮಾತ್ರ, ಮತ್ತು ಅದನ್ನು ಕಾರ್ಯವೆಸಗುವ ಶಕ್ತಿಗಾಗಿ ಪ್ರಾರ್ಥಿಸಿದೆವು .
12.         ಈ ಮೆಟ್ಟಿಲುಗಳ ಪರಿಣಾಮವಾಗಿ, ನಾವು ಪಡೆದ ಆಧ್ಯಾತ್ಮಿಕ ಜಾಗೃತಿಯಿಂದಾಗಿ, ಈ ಸಂದೇಶವನ್ನು ಅಮಲಿಗಳಿಗೆ ತಲುಪಿಸಲು, ಮತ್ತು ಈ ತತ್ತ್ವಗಳನ್ನು ನಮ್ಮೆಲ್ಲಾ ವ್ಯವಹಾರಗಳಲ್ಲಿ ಆಚರಿಸಲು ಯತ್ನಿಸಿದೆವು .
ಇವುಗಳಲ್ಲಿ ಕೆಲವನ್ನು ನಮ್ಮಲ್ಲಿ ಯಾರಿಂದಲೂ ಸಂಪೂರ್ಣವಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಆದುದ್ದರಿಂದ ನಾವು ಇವುಗಳಲ್ಲಿ ಕೆಲವನ್ನು ಜಾರಿಸಲು ನೋಡಿದೆವು, ಇನ್ನೂ ಸುಲಭವಾದ ದಾರಿಯು ನಮಗೆ ಸಿಗಬಹುದು, ಎಂದು ನಾವು ಭಾವಿಸಿದೆವು. ಆದರೆ ಅದು ನಮಗೆ ಸಿಗಲಿಲ್ಲ. ಆದುದ್ದರಿಂದ ನಾವು ನಿಮ್ಮಲ್ಲಿ ವಿನಯಪೂರ್ವಕವಾಗಿ ಕೇಳಿಕೊಳ್ಳುವುದೇನೆಂದರೆ, ಆರಂಭದಿಂದಲೇ ನೀವು ನಿರ್ಭೀತರಾಗಿ ಹಾಗೂ ಸಂಪೂರ್ಣವಾಗಿ ಈ ಹೆಜ್ಜೆಗಳನ್ನು ಅನುಸರಿಸಲು ಪ್ರಯತ್ನಿಸಿ. ಯಾಕೆಂದರೆ ನಮ್ಮಲ್ಲಿ ಕೆಲವರು ತಮ್ಮ ಹಳೆಯ ವಿಚಾರಗಳನ್ನೇ ಹಿಡಿದು ನಿಂತರು, ಆದರೆ ಅವು ಪಲಕಾರಿಯಾಗಲಿಲ್ಲ, ಅವುಗಳನ್ನು ಸಂಪೂರ್ಣವಾಗಿ  ತ್ಯೆಜಿಸುವವೊರೆಗೂ ಅವರಿಗೆ ಏನೂ ಪ್ರಯೋಜನವಾಗಲಿಲ್ಲ.

ನೆನಪಿರಲಿ :- ನಾವು ಮದ್ಯದೊಂದಿಗೆ ವ್ಯವಹರಿಸುತ್ತಿದ್ದೇವೆ ಅದು ಕಪಟಿ ಶಕ್ತಿಶಾಲಿ ಮತ್ತು ಮನಸ್ಸಿನಲ್ಲಿ ಗೊಂದಲ ಉಂಟುಮಾಡುವ ಹಾಗೂ ತನ್ನ
ಧಂಭ ಭಾಹುಗಳಿಂದ ನಮ್ಮನ್ನು ತನ್ನ ತೆಕ್ಕೆಯೊಳಕ್ಕೆ ಸೆಳೆದುಕೊಲ್ಲಬಲ್ಲ ಸಾಮರ್ತ್ಯ ಹೊಂದಿದೆ. ಹೊರಗಿನ ( ಎ ,ಎ, ಯ ಹನ್ನೆರಡು ಹೆಜ್ಜೆಗಳನ್ನು ಅನುಸರಿಸಲು ಪ್ರೇರಿಪಿಸಬಲ್ಲ ಸಂಸ್ಥೆಯ )  ಸಹಾಯವಿಲ್ಲದಿದ್ದರೆ, ನಮ್ಮಿಂದ ಎಂದಿಗೂ ಜಯಿಸಲು ಅಸಾದ್ಯ. ಆದರೆ ಸರ್ವಶಕ್ತನಾದ ಒಬ್ಬನಿದ್ದಾನೆ ಅವನೇ ಭಗವಂತನು, ಅವನು ನಿಮಗೆ ಈಗ ಸಿಗಲಿ ಎಂಬುದೇ ನಮ್ಮ ಆಶಯ. ಯಾಕೆಂದರೆ ನಮ್ಮ ಅರೆವಾಸಿ ಪ್ರಯತ್ನಗಳು ಏನೂ ಪ್ರಯೋಜನಕಾರಿಯಾಗಲಿಲ್ಲ, ಕೊನೆಗೆ ನಮಗೆ ನಾವೇ  ಪರಿವರ್ತನೆ ಹೊಂದುವ ಸ್ತಿತಿಗೆ ತಲುಪಿದೆವು.  ನಾವು ನಮ್ಮನ್ನೇ ತೊರೆದು ಆತನ ಸಂರಕ್ಷಣೆ ಮತ್ತು ಆರೈಕೆಗಾಗಿ ಭಗವಂತನಲ್ಲಿ ಶರಣಾದೆವು.

ಪ್ರಾತಃಕಾಲದ ಪ್ರಾರ್ಥನೆ
ನನ್ನ ದೇವ ನನ್ನ ಇಚ್ಚೆ ನನ್ನ ಜೀವ ನನ್ನ ಆತ್ಮ ನನ್ನ ಸರ್ವಸ್ವವನ್ನೂ ನನ್ನ ಕುಟುಂಬದೊಡನೆ ನಿಮಗೆ ಸಮರ್ಪಿಸುತ್ತೇನೆ ನನ್ನ ಚಿತ್ತ ನಿನ್ನಲ್ಲಿ ಮತ್ತು ನಾನು ಕೈಗೊಳ್ಳುವ ಸಕಳಕಾರ್ಯಗಳು ನೆರವೇರಲಿ ನನ್ನ ನೈತಿಕ ಮತ್ತು ಆದ್ಯಾಥ್ಮಿಕ ಶತ್ರುಗಳ ಮತ್ತು ಅವರ ಕಾರ್ಯರೊಪಗಳ ಭಲವನ್ನು ಸಂಪೋರ್ಣ ನಾಶಮಾಡು ಸ್ವಾಮಿ ಅಮಲಿನ ಬಲದೆದುರು ನಾನು ಆಶಕ್ತನೆಂದು ಒಪ್ಪಿಕೊಳ್ಳಲು ನನಗೆ ಸಹಾಯಮಾಡಿರಿ ಎ ಎ ಕೂಟದ ಹನ್ನೆರಡು ಹೆಜ್ಜೆಗಳನ್ನು ಅನುಸರಿಸಲು ನನಗೆ ಸಹಾಯಮಾಡಿರಿ ನನ್ನ ವರ್ತನೆಯಲ್ಲಿ ಶಾಂತಿ ತಾಳ್ಮೆ ಮತ್ತು ಘನವಾದ ಬಧುಕನ್ನು ರೂಪಿಸಿಕೊಳ್ಳಲು ಅಡ್ಡಿ ಮತ್ತು ತೊಡಕಾಗಿರುವ ನನ್ನ ದುರ್ಗುಣಗಳನ್ನು ನನ್ನಿಂಧ ನನ್ನಿಂದ ಕಿತ್ತೆಸೆದು ಪುನೀತನನ್ನಾಗಿ ಮಾಡೆಂದು ನಮ್ರೆತೆಯಿಂದ ಪ್ರಾರ್ಥಿಸುತ್ತೇನೆ ಸ್ವಾಮಿ ನನ್ನಲ್ಲಿ ಮತ್ತು ನನ್ನ ಕುಟುಂಬದಲ್ಲಿರುವ ನ್ಯೂನ್ಯತೆಗಳನ್ನು ದೂರಮಾಡಿ ಸಮಾದಾನ ನೀಡುವ ಕೃತಜ್ಞತೆಗಳನ್ನು ಸಲ್ಲಿಸುವ ವಿನಯ ಪ್ರಾಮಾಣಿಕತೆ ತ್ರಿಕರ್ಣಶುದ್ದಿ ನಿಸ್ವಾರ್ಥ ಮತ್ತು ಪ್ರೀತಿ ಪ್ರೇಮಗಳ ವರಪ್ರಸಾದಗಳನ್ನು  ಹೇರಳವಾಗಿ ನನ್ನ ಮೇಲೆ ಸುರಿಸೆಂದು ಕೇಳಿಕೊಳ್ಳುತ್ತೇನೆ ಸ್ವಾಮಿ ಕಷ್ಟಪಡುತ್ತಿರುವ ಅಮಲುರೋಗಿಗಳಿಗೆ ಸಹಾಯ ನೀಡುವಂತಹ ಪ್ರಚೋದನೆಯನ್ನು ನನ್ನಲ್ಲಿ ಬೆಳೆಸು ನಿರಂತರ ಪ್ರವಹಿಸುವ ವರಪ್ರಸಾದಗಳ ಪ್ರಹಾರವನ್ನು ಎಚ್ಚರಿಕೆಯಿಂದ ಗುರುತಿಸಿ ಇಂದಿನ ದಿನವನ್ನು ಪುನೀತನನ್ನಾಗಿ ಕಳೆಯಲು ಶಕ್ತಿ ನೀಡು ಹೇ ಪ್ರಭು ನಿರಂತರ ಆಶಿರ್ವಾದವನ್ನು ನೀಡುವ ದೇವರಿಗೆ ನನ್ನ ಆರಾದನೆ ಸ್ತ್ರುತ್ರಿ ಸ್ತೋತ್ರ ಸಲ್ಲಲಿ .
ಕಷ್ಟಪಡುವ ಅಮಲುರೋಗಿಗಳಿಗೆಪ್ರಾರ್ತನೆ
ಎಲ್ಲೆಲ್ಲಿ ಅಮಲುರೋಗಿಗಳಿರುವರೋ ಅವರೆನ್ನೆಲ್ಲಾ ಕಾಪಾಡಿ ರಕ್ಷಿಸು , ವಿಶೇಷವಾಗಿ ನತದ್ರುಷ್ಟರಾಗಿ ನಿರ್ಭಾಗ್ಯ ಸ್ಥಿತಿಯಲ್ಲಿದ್ದು ಮತ್ತು ತಮ್ಮ ಮನೋಸ್ತಿಮಿತಕ್ಕಾಗಿ ಕಷ್ಟಪಡುತ್ತಿರುವ ಅಮಲು ರೋಗಿಗಳನ್ನು ದಯೆಯಿಂದ ಉದ್ದರಿಸಿ ಸೋದರ ಭಾವಕೊಟಕ್ಕೆ ಅವರನ್ನು ಜಮಾಯಿಸು ದೇವಾನುದೇವ ಈ ರೋಗದ ಹಿಡಿತದಲ್ಲಿ ಸಿಕ್ಕಿಒದ್ದಾಡುತ್ತಿರುವ ಮತ್ತು ಈ ರೋಗದಿಂದ ಬಿಡುಗಡೆ ಹೊಂದಲು ನಿಶ್ಚಯ ಮಾಡಿರುವ ನಮ್ಮ ಸೋದರ ಅಮಲುರೋಗಿಗಳನ್ನು ಕೃಪೆಯಿಂದ  ನೋಡು ಸ್ವಾಮಿ .

Circus

In my prized AA sobriety, I was still running a kind of circuswhich had numerous, highly believable posters all over its outside See the Spectacular Non-Drinking Person! Watch how Movingly He can Recite the Twelve Steps! --but which had nothing going on inside the tent. I've been working hard to shut that circus down ever since with varying degrees of success.

The Best of the Grapevine [Vol. 3], p. 238


monkey’s asleep but the circus hasn't left town.


P R I D E = Personal Recovery Involves Deflating Ego.