Thursday, May 19, 2016

ವಿವಾಹ ವಾರ್ಷಿಕೋತ್ಸವ


 



ಹೀಗೆ ಮೊನ್ನೆ ಯಾವುದೋ ಕೆಲಸದಲ್ಲಿ ಸಂಪೂರ್ಣ ಮಗ್ನನಾಗಿದ್ದ ನನಗೆ, ನಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಕೇವಲ ನಾಲ್ಕೇ ದಿನಗಳು ಬಾಕಿ ಇರುವುದು. ಏನಾದ್ರು ಉಡುಗೊರೆ ಕೊಡಿಸಬೇಕು ಅಂತ ವಾರದ ಹಿಂದೆ ನನ್ನ ಹೆಂಡತಿ ಹೇಳಿದ ಮಾತು ಜ್ನಾಪಕಕ್ಕೆ ಬಂತು,
ಸರಿ ಸಂಜೆ ಮನೆಗೆ ಹೋಗುವಾಗ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರಾಯ್ತು ಅಂತ ಯೋಚನೆಯನ್ನ ಆ ಕ್ಷಣ ಕೈಬಿಡುವುದು ಮೇಲು ಅಂದು ಕೊಂಡ ನನಗೆ, ಮುಂದು ಆಗುವುದರ ಅರಿವು ಆಗ ಇರಲಿಲ್ಲ!

ಆ ಕ್ಷಣದ ಯೋಚನೆ ನಂತರ ಮದುವೆ ವಾರ್ಷಿಕೋತ್ಸವ-ಉಡುಗೊರೆ ಅಂತ ಮತ್ತೆ ನೆನಾಪಾಯ್ತು. ನೆನಪಾದ ಕೂಡಲೆ, ಈವತ್ತು ಯಾವದಿನ ಅಂತ ಮೋಬೈಲ್ನಲ್ಲಿ ನೋಡಿದ ನನಗೆ, ನಿದ್ದೆ ಮಂಪರು, ಹಾರಿ ಹೋಗಿತ್ತು. ಯಾಕಂದರೆ ಇವೊತ್ತು ನಮ್ಮ ಮದುವೆ ವಾರ್ಷಿಕೋತ್ಸವದ ದಿನವಾಗಿತ್ತು. ನನ್ನಾಕೆ ತುಂಬಾ ಮುಂಚೇನೆ ಎದ್ದು ಸರಸರನೆ ಸ್ನಾನಕ್ಕೆ ಹೋಗಿದ್ದು, ಹುಸಿ ಕೋಪದಲ್ಲಿ ಓಡಾಡುತ್ತಾ ಇದ್ದದ್ದನ್ನು ನಿದ್ದೆಯ ಮಂಪರಿನಲ್ಲೇ ಗಮನಿಸಿದ್ದೆ. ಏನಪ್ಪಾ ಮಾಡೋದು ಅಂತ, ನನ್ನ ಪರಿಸ್ಥಿತಿ ನೆನೆದು ನನ್ನಲ್ಲಿ ನನ್ನ ಬಗ್ಗೆ ಕನಿಕರ ಮೂಡಬಹುದಾಗಿತ್ತು ಅಷ್ಟೆ! ಮೂಡಿತು ಕೂಡ.
ಲಗುಬಗನೆ ಎದ್ದವನೇ ಸೀದಾ ನನಗಾಗಿಯೆ ಕಾಯುತ್ತಾ ಕೊಳಲನ್ನು ಊದುತ್ತಾ ನಿಂತಂತಿದ್ದ ಕೃಷ್ಣನಿಗೆ ಕೈಮುಗಿದು, ನಮ್ಮ ಬೆಡ್ರೂಮಿನಿಂದ ಹೊರಗಡೆ ಬಂದೆ, ಅಲ್ಲಿ ನನ್ನಾಕೆ ಪೂಜೆಗೆ ಎಲ್ಲಾ ತಯಾರಿ ನಡೆಸಿದ್ದಳು! ಏನು ಅಂತ ಮಾತಾಡಿಸಲಿ, “ಸ್ಸಾರಿ, ಮರೆತೋಯ್ತು, ಏನ್ ಉಡುಗೊರೆ ಬೇಕು, ಕೇಳು ಕೊಡಿಸ್ತೀನಿ” ಅಂದ್ರೆ ಸಾಕಾಗುತ್ತಾ, ನನ್ನ ಕೆಲಸ ಅಂತಹುದು, ಏನ್ ಮಾಡ್ಲಿ ಮರೆತು ಹೋಯ್ತು, ಕ್ಷಮಿಸೆಂದರೆ ಸಾಕಾಗುತ್ತಾ? ಎಂದು ತಿಳಿಯದವನಾಗಿದ್ದೆ.
 
ಆಗಲೇ ನನ್ನ ಚಿಕ್ಕ ಮಗಳು ಸ್ನಾನ ಮುಗಿಸಿ ಬಂದವಳು ಹ್ಯಾಪ್ಪಿ ಆನುವರ್ಸರಿ ಪಪ್ಪಾ ಅಂದುಬಿಟ್ಟಳು ನನಗೆ ಅಷ್ಟೇ ಸಾಕಾಗಿತ್ತು ಮುಂದೆ ಆಗುವುದರ ಪರಿವೇ ಇಲ್ಲದೆ ಕೇಳಿಯೇ ಬಿಟ್ಟೆ, “ಮದುವೆ ವಾರ್ಷಿಕೋತ್ಸವ ಶುಭಾಶಯಗಳು, ನಿಂಗೆ ಏನ್ ಬೇಕು, ಕೇಳು ಕೊಡಿಸ್ತೀನಿ” ಅಂತ, ನನ್ನಾಕೆ ಮುಂದಕ್ಕೆ ಹೋಗುತ್ತಾ ವಾರೆ ನೋಟ ಬೀರುತ್ತಾ ತಲಬಾಗಿಲ ಹತ್ತಿರ ಹೋದ್ಳು, ಬಾಗಿಲ ಪೂಜೆ ಮಾಡ್ತಾ ನನ್ನಾಕೆ ನನ್ನ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಒಳ ಬರುತ್ತಾ ಇರಬೇಕಾದ್ರೆ, ಮತ್ತೆ ಕೇಳಿದೆ. ಪ್ರತ್ಯುತ್ತರ ಏನೂ ಬರಲಿಲ್ಲ, ಹಾಗೆಯೆ ದೇವರ ಮನೆಯೊಳಗೆ ಹೋಗಿ ಉದ್ದಿನಕಡ್ಡಿ, ಕುಂಕುಮ ಇಟ್ಟು ಹೊರ ಬಂದು, ಸರ ಸರನೆ ಅಡುಗೆ ಮನೆ ಕಡೆ ಹೋಗುತ್ತಾ ಅಂದಿದ್ದು “ನಿಮ್ಮಿಷ್ಟ ಕಣ್ರೀ” . ಇದೊಳ್ಳೆ ಕತೆಯಾಯ್ತಲ್ಲ, ಇದು ಇನ್ನೂ ಕಷ್ಟ. ಏನ್ ತಂದ್ರೂ ತಾಪತ್ರಯ. ಎಂಥಾ ಪರಿಸ್ಥಿತಿಗೆ ನನ್ನನ್ನೆ ನಾನು ತಂದು ನಿಲ್ಲಿಸಿದ್ದೀನಲ್ಲಾ ಅಂತ ನನ್ನನ್ನೆ ನಾನು ಬೈದುಕೊಳ್ಳುವುದು ಬಾಕಿಯಿತ್ತು ಅಷ್ಟೆ.
 
ಅಷ್ಟರಲ್ಲೇ ಸೋಫಾ ಪಕ್ಕದ ಗೋಡೆಗೆ ಒರಗಿಕೊಂಡು “ಮತ್ತೆ ಮತ್ತೆ ....
ನೀವು ಈವತ್ತು ನನ್ ಜೋಡಿ ಇರಿ ಸಾಕು, ಬೇರೆ ಏನೂ ಬೇಡ, ಬರೀ ಊರೂರು ಅಲೆಯೋದು ಕೆಲ್ಸ ಅದು ಇದು ಅಂತ ಎಷ್ಟೊಂದಿನಗಳಾದ್ವು ನೆಮ್ಮದಿಯಿಂದ ಕೂತು ಮಾತನಾಡಿ” ಅಂತ ಕೇಳಿದಳು ನನ್ನಾಕೆ (ನನ್ನ+ ಆಕೆ) ಅಷ್ಟೆ,!!! ಜೋಬಿನಲ್ಲಿದ್ದ ಹಣ ಅಷ್ಟನ್ನೂ ಅವಳ ಕೈಯಲ್ಲಿ ಇಟ್ಟುಬಿಟ್ಟೆ ನಾನು....

 
 
 
ನಮ್ಮ ದಾಂಪತ್ಯ ಜೀವನಕ್ಕಿಂದು ದಶಕ
ಒಂದು ಧಶಕ ಕಳೆದರೂ
ನೀನು ನನಗೆ, ನಾನು ನಿನಗೆ ಅವಲಂಬಿತ.....!
 
ನೀನೆನ್ನ ಸುಖ, ದುಃಖದ ಗೆಳತಿ
ಸನ್ಮಾರ್ಗ ತೋರುವ ಕನ್ನಡಿ
ನನ್ನೀ ಭದುಕಿಗೆ ಪ್ರಕಾಶ
ನನ್ನ ಜೀವನದ ಜೀವನಾಡಿ
ನೀ ಎನ್ನ ಜೀವನ ಸಂಗಾತಿ....!
 
ನೀನೆನಗೆ ಆ ದೇವರು ನೀಡಿದ ಅನುಗ್ರಹ
ನಿನ್ನಿಂದಲೇ ಸುಖಮಯ ನನ್ನ ಈ ಗೃಹ
ನನ್ನ ಪ್ರತಿ ಹೆಜ್ಜೆಯಲೂ ಇರಲಿ ನಿನ್ನ ಹೆಜ್ಜೆ
ಈ ಪಯಣ ಹೀಗೆಯೇ ಸಾಗಲಿ
ಕೊನೆ ಉಸಿರಿರುವ ತನಕ 
ಕೊನೆ ಉಸಿರಿರುವ ತನಕ …………..!

Tuesday, August 26, 2014

ಮನುಷ್ಯ ಹಾಳಾಗುವುದಕ್ಕೆ ಮೂಲವೇ ಕೋಪ....!!!!?????





ಮನುಷ್ಯ ಹಾಳಾಗುವುದಕ್ಕೆ ಮೂಲವೇ ಕೋಪ. 


ಲ್ಲ ರೀತಿಯ ಭಾವನೆಗಳೂ ಶಕ್ತಿಯ ಸ್ವರೂಪವೆ ಆಗಿದೆ. ಹಾಗೆ ನೋಡಿದರೆ ಕೋಪ ಮತ್ತು  ದುಃಖ ಕೂಡ ಶಕ್ತಿಯೇ. ಆದರೆ ದುಃಖ, ನಮ್ಮನ್ನು ಚಿಂತನೆಗೆ ಅಚ್ಚಿ, ಕ್ರಿಯಾಶೀಲರನ್ನಾಗಿಸುತ್ತದೆ. ಅದೇ ಕೋಪ ಹಾಗಲ್ಲ ನೀವು ಕೋಪಗೊಂಡಾಗ ನೀವು ಒಂದು ಭ್ರಮಾಲೋಕವನ್ನು ಸಷ್ಟಿಸಿಕೊಳ್ಳುತ್ತೀರ. ಜತೆಗೆ, ನಿಮ್ಮ ಕೋಪಕ್ಕೆ ಸಮರ್ಥನೆಗಳನ್ನೂ ಹುಟ್ಟುಹಾಕಿಕೊಳ್ಳುತ್ತೀರ. ನಿಮ್ಮದೇ ಭಾವನೆಗಳು ನಿಮಗೆ ಅರ್ಥವಾಗದೇ ಹೋಗುತ್ತವೆ. ಅಷ್ಟೇ ಅಲ್ಲ, ನೀವು ಸಷ್ಟಿಸಿಕೊಂಡಿರುವ ಭ್ರಮಾಲೋಕವೇ ನೈಜವಾದದ್ದು ಎನ್ನುವ ಭ್ರಮೆಯನ್ನೂ ನಿಮ್ಮ ಕೋಪ ಹುಟ್ಟಿಸುತ್ತದೆ. ಮೂಲಕ ನಿಮ್ಮೊಳಗೆ ನೀವೇ 'ಮಾನಸಿಕ ಜೈಲ'ನ್ನು ಸಷ್ಟಿಸಿಕೊಳ್ಳುತ್ತೀರ. ನೀವು ಜಾಗೃತರಾದರೆ ಇಂಥ ಭ್ರಮೆಗಳಿಂದ ಹೊರಬರಬಹುದು. ಕೋಪವೆಂಬ ಶಕ್ತಿಯನ್ನೇ ಅನುಕಂಪವಾಗಿ ಮಾರ್ಪಡಿಸಿಕೊಳ್ಳಬಹುದು. ಕೋಪಕ್ಕೆ ಕಾರಣವಾದ ಅಂಶವೇ ನಿಮ್ಮಲ್ಲಿ ಸಹಾನುಭೂತಿಯನ್ನೂ ಹುಟ್ಟುಹಾಕುತ್ತದೆ. ಅಷ್ಟಕ್ಕೂ ನಾವು ಇತರರ ಮೇಲೆ ಕೋಪಿಸಿಕೊಳ್ಳುವುದೇಕೆ? ನೀವು ಹೇಗಿರಬೇಕು ಎಂದು ನೀವೇ ರೂಪಿಸಿಕೊಂಡ ನಿಮ್ಮ ಕಲ್ಪನೆಗೆ ಬೇರೆಯವರು ಹೊಂದಿಕೊಳ್ಳುವುದಿಲ್ಲ ಎನ್ನುವುದು ಕೋಪಕ್ಕೆ ಕಾರಣ. ಬೇರೆಯವರನ್ನು ನಿಮ್ಮ ಇಮೇಜ್ ಎಂಬ ಚೌಕಟ್ಟಿನೊಳಗೆ ಹೊಂದಿಸಿಕೊಳ್ಳಲು ಹೆಣಗುತ್ತೀರ. ಅದು ಸಾಧ್ಯವಾಗಿದ್ದಾಗ ಅವರ ಮೇಲೆ ನಿಮಗೆ ಕೋಪ ಬರುತ್ತದೆ.
ಅಂತಹ ಸಂದರ್ಭಗಳಲ್ಲೇ ನಮಗೆ ಗುರುವಿನ ಅಗತ್ಯವಾಗುವುದು ಯಾಕೆಂದರೆ ನಮಗೆಲ್ಲರಿಗೂ ತಿಳಿದಿರುವಂತೆ ರೈಲು ಚಲಿಸುವುದು ಹಳಿಗಳ ಮೇಲೆ. ಆದರೆ, ರೈಲು ಮತ್ತು ಹಳಿ ನಡುವೆ ಎಂಥ ವಿಶಿಷ್ಟ ಸಂಬಂಧವಿದೆ ಎನ್ನುವುದನ್ನು ಗಮನಿಸಿದ್ದೀರಾ? ರೈಲು ಚಲಿಸುವುದು ಹಳಿ ಸಿದ್ಧ ಮಾಡಿದ ಹಾದಿಯಲ್ಲಿ ಮಾತ್ರ. ಆದರೆ, ಅಷ್ಟು ಮಾತ್ರಕ್ಕೆ ರೈಲು ತಾನು ತಲುಪಬೇಕಾದ ತಾಣ ತಲುಪಲು ಸಾಧ್ಯವೇ? ಇಲ್ಲ, ರೈಲು ತನ್ನ ಗಮ್ಯ ತಲುಪಲು ಅದರದೇ ಆದ ಸ್ವಂತ ಶಕ್ತಿ (ಎಂಜಿನ್) ಬೇಕು. ಹಳಿಗಳಿಲ್ಲದೆ ರೈಲು ತನ್ನ ನಿಗದಿತ ಸ್ಥಳ ತಲುಪಲು ಸಾಧ್ಯವೇ ಇಲ್ಲ ಎನ್ನುವುದು ನಿಜ. ಆದರೆ, ರೈಲಿಗೆ ತನ್ನದೇ ಸ್ವಂತ ಶಕ್ತಿ ಇಲ್ಲದೇ ಹೋದರೂ ಅದು ತನ್ನ ಗಮ್ಯ ತಲುಪಲು ಸಾಧ್ಯವಿಲ್ಲ. ಇದೇ ತೆರನಾದ ಸಂಬಂಧ ಗುರು ಮತ್ತು ಶಿಷ್ಯನದು. ಎಂದರೆ, ಗುರು, ಶಿಷ್ಯನು ಗುರಿ ತಲುಪುವಲ್ಲಿ ನೆರವಾಗುತ್ತಾನೆ. ಅಷ್ಟು ಮಾತ್ರವಲ್ಲ, ಗುರುವಿಲ್ಲದೆ ಶಿಷ್ಯನೊಬ್ಬ ತನ್ನ ಗುರಿ ತಲುಪಲು ಸಾಧ್ಯವೂ ಇಲ್ಲ. ಗುರುವಿನ ಕೃಪೆ ಇದೆ ಎಂದ ಮಾತ್ರಕ್ಕೆ ಶಿಷ್ಯ ತನ್ನ ಗುರಿ ತಲುಪುತ್ತಾನೆ ಎಂದೂ ಅಲ್ಲ. ಅದಕ್ಕೆ ಶಿಷ್ಯನ ಸ್ವಂತ ಶಕ್ತಿ, ಶ್ರಮವೂ ಬೇಕು. ಗುರುವಿನ ಕೆಲಸ ಏನಿದ್ದರೂ ದಾರಿ ಮಾಡಿಕೊಡುವ, ಸೂಕ್ತ ಮಾರ್ಗದರ್ಶನ ಮಾಡುವ, ನಿರ್ದೇಶಿಸುವ ಕೆಲಸ ಅಷ್ಟೆ. ಒಟ್ಟಾರೆ ಹೇಳುವುದಾರೆ, ಗುರುವಿನ ಕೃಪೆ ಇಲ್ಲದಿದ್ದರೆ ಶಿಷ್ಯನ ಯಾನ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ.

ಗುರುವಿನೊಂದಿಗೆ ಶಿಷ್ಯನ ಸಂಬಂಧ ವಿಶಿಷ್ಟವಾದದ್ದು. ಅದು ನಿರ್ಮಲವಾದ ಪ್ರೀತಿ. ಯಾವುದರಿಂದಲೂ ಮಾಡಲಾಗದ ಪವಾಡಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವುದು ಗುರುವಿನ ನಿಷ್ಕಷ್ಮಲ ಪ್ರೀತಿಗೆ ಮಾತ್ರ.
ನೀವು ಕೋಪಿಸಿಕೊಳ್ಳುವ ಪ್ರತಿ ಗಂಟೆಗೆ ನಿಮ್ಮ 60 ನಿಮಿಷಗಳ ಸಂತೋಷ ಕಳೆದುಕೊಳ್ಳುತ್ತಿರುತ್ತದೆ. ಪ್ರಯೋಜನವೇ ಇಲ್ಲದ ವಿಷಯಗಳಿಗೆಲ್ಲ ನಮ್ಮ ಸಂತೋಷ ಹಾಳು ಮಾಡಿಕೊಳ್ಳುವುದಾದರೂ ಏಕೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಕೆಲವೊಮ್ಮೆ, ಏನೇನೂ ಮುಖ್ಯವಲ್ಲದ ವಿಷಯಗಳು ಅತಿ ಮುಖ್ಯವಾಗುತ್ತವೆ; ನಮಗೆ ಸರಿ ಎಂದು ಕಾಣುವ ಒಂದು ವಿಚಾರದಲ್ಲಿ ಬದ್ಧರಾಗಿ ಅದರಲ್ಲಿ ಗೆಲ್ಲುವುದಕ್ಕಾಗಿ ಹಠ ಹಿಡಿಯುತ್ತೇವೆ. ಮೂಲಕ ನಮ್ಮ ಸಂತೋಷವನ್ನು ತ್ಯಾಗ ಮಾಡುತ್ತೇವೆ. ಇದಕ್ಕೇನು ಕಾರಣ? ನಾವು ಜೀವನವನ್ನು ನೋಡುತ್ತಿರುವ ದಷ್ಟಿಕೋನದಲ್ಲೇ ಎಲ್ಲೋ ತಪ್ಪಿದೆಯಾ? ಹೆಚ್ಚು ಹಣ ಸಂಪಾದಿಸಲು, ಅಂತಸ್ತು ಗಳಿಸಲು ಹೋಗಿ ಜೀವನವನ್ನು ಕಳೆದುಕೊಳ್ಳುತ್ತೇವಾ? ಯೋಚಿಸಿ ನೋಡಿ. ಕೋಪ ಎನ್ನುವುದು ಮೂರ್ಖತನದ ಅಭಿವ್ಯಕ್ತಿ ಎನ್ನುವುದನ್ನು ಮರೆಯದಿರಿ.ಏನಂತೀರೀ ಏನಂತೀರಿ ?