ಲೋಕದಲ್ಲೇ ಕಟ್ಟ ಕಡೆ ಮನುಷ್ಯನ ಪುಟ್ಟ ಹೃದಯವೇ
ನೆನಪನ್ನು ಹೊತ್ತುಕೊಂಡು ನೋವನ್ನು ಭರಿಸಿಕೊಂಡು
ನಡೆ ಮುಂದೆ ನಗುತಲೇ ಎಂದೆಂದೂ
ಬೆರಳು ತೋರಿಸೋ ದಾರಿಯಲ್ಲಿ ಹರಿಯದು ನದಿಯೆಂದೂ
ವಿಧಿ ತೋರಿಸೋ ದಾರಿಯಲ್ಲಿ ನೀ ಓಡು ಎಂದೆಂದೂ
ನಿನ್ನ ನಲುಗುವ ನೆನಪು ನೋರಾದರೂ
ಜೊತೆಗಾತಿಗಾಗಿ ಹುಡುಕಾಡು ನೀನೆಂದೂ
ಕಡಲಲ್ಲಿ ಸೇರೋ ಹನಿಯೇ ವೇದನೆ ಏಕೇ
ಅಲೆಯೊಡನೆ ಸೇರಿ ನಲಿಯೋ ಜೀವ ನೀನು
ಯಾತನೆಯನ್ನು ಭರಿಸೋ ಕಲ್ಲುಗಳೇ
ಸುಂದರ ಶಿಲೆಗಳಾಗುವುದು
ನಿನ್ನ ಕಣ್ಣೀರಿಗೆ ಬೆಲೆಯಿಲ್ಲವಾದರೆ
ನೀ ಅಳುವುದರಲ್ಲಿ ಅರ್ಥವಿಲ್ಲ
ಕನಸನ್ನು ಹೊತ್ತ ಮನಸೇ ನಿಭಾಯಿಸುವ ಯತ್ನ ಯಾಕೆ
ನಡೆಯಲು ದಾರಿಯಿದೆ ಪ್ರಾರಂಬಿಸು
ಈ ಲೋಕಕ್ಕಿಂತ ದೊಡ್ಡ ಆಕಾಶವೇ ದುಃಖದಲ್ಲಿ ಅಳುವುದು
ನೀ ಅತ್ತುಬಿಡು ನೋವೆಲ್ಲಾ ಮರೆತುಬಿಡು
ಇದು ನಮ್ಮಂತವರಿಗಾಗಿಯೇ ಇರುವ ತಾಣ
ಇಲ್ಲಿ ಜಾಲಾಡು ನೆಮ್ಮದಿಯು ನಿನ್ನದಾಗುವುದು
No comments:
Post a Comment