Tuesday, January 1, 2013

ಹೊಸವರ್ಷದ ಶುಭಾಶಯಗಳು

ಹೊಸವರ್ಷದ ಶುಭಾಶಯಗಳೊಂದಿಗೆ
ಬೆಳಗ್ಗೆ ಎದ್ದು ಹೊರಬರುವಾಗ
ಅದೇ ಹಳೆಯ ಸೂರ್ಯ ಇಣುಕುತ್ತಿದ್ದ
ಮನೆಯ ಮುಂದಿನ ರಸ್ತೆಯ ಬದಿಯಲ್ಲಿ
ದಿನವು ಇರುತ್ತಿದ್ದ  ಅದೆ ಎರಡು ಕಾರುಗಳು
ಮನೆಯ ಹಿಂದೆ ಪಾರಿವಾಳಗಳ  ಕಲವರ
ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ
ಮನೆಯ ಮುಂದು ರಂಗೋಲಿ
ಹಾಕುತ್ತಿರುವ ವಯಸ್ಸಾದ ಮಹಿಳೆಯರು
ಶಾಲು ಹೊದ್ದು ಬದುಕುವ ಉತ್ಸಾಹದಿಂದ
ವಾಕಿಂಗ್ ಹೊರಟಿರುವ ವಯಸ್ಕರು
ಅದೆ ಗಾಳಿ ಅದೆ ಭೂಮಿ ಅದೆ ನೀರು
ಎಂದಿಗೂ ಬದಲಾಗದ ಅವುಗಳು
ಆದರೆ ನನ್ನೊಳೆಗೇನೆ ಬೇರೆ
ನಿನ್ನೆಯವರೆಗೂ ಇದ್ದವ ಇಂದು ಕಾಣುತ್ತಿಲ್ಲ
ಎಲ್ಲಕ್ಕು ನಾನು ನಾನು ಎನ್ನುತ್ತಿದ್ದವ
ಇಂದೇಕೊ ಎಲ್ಲಕ್ಕು ನಾನೇ ಅಲ್ಲ ? ಎನ್ನುತ್ತಿರುವ
ನೆನ್ನೆಯ ತನಕ ಎಲ್ಲವನ್ನು ಕಡಿದು ಹಾಕಬಲ್ಲೆ ಎಂದು ಕೂಗಿದವ
ಇಂದು ಕೊಡಲಿ ಎಸೆದು ಕುಳಿತಿರುವ
 

No comments:

Post a Comment