ಪಪ್ಪ ಪಪ್ಪ
ನನ್ನ ಮುದ್ದಿನ ಪಪ್ಪ
ಕೇಳಿದ್ದು ಕೊಡಿಸೋ ಮೆಚ್ಚಿನ ಪಪ್ಪ
ಒಳ್ಳೇದು ಕಲಿಸೋ ಜಾಣ್ಮೆಯ ಪಪ್ಪ
ಕೆಟ್ಟದ್ದು ಬಿಡಿಸೋ ಪ್ರೀತಿಯ ಪಪ್ಪ.
ಪಪ್ಪ ಪಪ್ಪ
ನನ್ನ ನೆಚ್ಚಿನ ಪಪ್ಪಾ
ಇಂದೇಕೆ ನನ್ನಲಿ ನಿನಗೆ ಈ ಕೋಪ?
ನೀ ಕುಡಿಯೋದನು ಅಮ್ಮನಿಗೆ
ನೀ ಕುಡಿಯೋದನು ಅಮ್ಮನಿಗೆ
ನಾ ಹೇಳಿದ್ದೇ ತಪ್ಪಾ?
ಪಪ್ಪ ಪಪ್ಪ
ನನ್ನ ನಲ್ಮೆಯ ಪಪ್ಪ
ನನ್ನ ನಲ್ಮೆಯ ಪಪ್ಪ
ನೀ ಹೀಗೆ ಮುನಿಸಿಕೊಂಡರೆ
ನನ್ನ ಹೋಮ್ ವರ್ಕ್ ಮಾಡೋರ್ಯಾರಪ್ಪ?
ಪಪ್ಪ ಪಪ್ಪ
ನನ್ನ ಮೆಚ್ಚಿನ ಪಪ್ಪ
ನನ್ನ ಹೋಮ್ ವರ್ಕ್ ಮಾಡೋರ್ಯಾರಪ್ಪ?
ಪಪ್ಪ ಪಪ್ಪ
ನನ್ನ ಮೆಚ್ಚಿನ ಪಪ್ಪ
ಒಮ್ಮೆ ನೀ ನನ್ನ ಮಾತನು ಕೇಳಪ್ಪ
ನೀ ಕುಡಿಯೋದ್ ಬಿಟ್ರೆ
ನನ್ ಹೋಮ್ ವರ್ಕ್ ನಾನೇ ಮಾಡಿಕೊಳ್ಳುವೆನಪ್ಪ.
ನೀ ಕುಡಿಯೋದ್ ಬಿಟ್ರೆ
ನನ್ ಹೋಮ್ ವರ್ಕ್ ನಾನೇ ಮಾಡಿಕೊಳ್ಳುವೆನಪ್ಪ.
ಪಪ್ಪ ಪಪ್ಪ
ನನ್ನ ಮುದ್ದಿನ ಪಪ್ಪ
ನೀ ಕುಡಿಯದಿದ್ದ ದಿನ
ನಮ್ಮ ಮನೆಯಲ್ಲಿ ಹಬ್ಬ ಕಾಣಪ್ಪ
ನೀನು ಕುಡಿದುಬಂದ ದಿನ
ಅಮ್ಮನ ಕಣ್ತುಂಬ ನೀರೇ ಕಾಣಪ್ಪಾ.
ಪಪ್ಪ ಪಪ್ಪ
ನನ್ನ ಜಾಣ್ಮೆಯ ಪಪ್ಪ
ನೀ ಕುಡಿಯುವುದನ್ನು ಬಿಟ್ಟರೆ
ಮತ್ತೆ ಅಮ್ಮನ ಮುಖದಲಿ
ನಗುವಿನ ಅಲೆಯನು ನೀ ಕಾಣುವೆಯಪ್ಪ.
ನಗುವಿನ ಅಲೆಯನು ನೀ ಕಾಣುವೆಯಪ್ಪ.
No comments:
Post a Comment