Thursday, March 21, 2013

ಗುಂಡಿನ ಗಮ್ಮತ್ತು


ಬಾರು ಎಂಬ ಎರಡಕ್ಷರವನ್ನು ಹುಡುಕಿ,
ಹಣ ಎಂಬ ಎರಡಕ್ಷರವನ್ನು ಬೋಳಿಸಿ.
ಬ್ರಾಂದಿ-ವಿಸ್ಕಿ ಎಂಬ ಎರಡಕ್ಷರವನ್ನು ಸೇವಿಸಿ,
ನಿಶೆ ಎಂಬ ಎರಡಕ್ಷರ ಏರಿಸಿ.
ಮೋರಿ ಎಂಬ ಎರಡಕ್ಷರದಲ್ಲಿ ಬಿದ್ದು ಹೊರಳಿ,
ನಿದ್ದೆ ಎಂಬ ಎರಡಕ್ಷರದಲ್ಲಿ ತೇಲಿ.
ಮನೆ ಎಂಬ ಎರಡಕ್ಷರವ ಮಾರಿ,
ರಂಡೆ ಎಂಬ ಎರಡಕ್ಷರದ ಜತೆಗೂಡಿ .
ಮಾನ ಎಂಬ ಎರಡಕ್ಷರವ ಕಳಕೊಂಡು,
ಏಡ್ಸ್ ಎಂಬ ಎರಡಕ್ಷರವ ಪಡಕೊಂಡು.
ಮುಂಡೆ ಎಂಬ ಎರಡಕ್ಷರವ ಮಡದಿಗೆ ಬಿಟ್ಟು,
ಚಟ್ಟ ಎಂಬ ಎರಡಕ್ಷರದ ಸವಾರಿಮಾಡಿ.  
ಕೊನೆಗೆ ಮಣ್ಣು ಎಂಬ ಎರಡಕ್ಷರವನ್ನು ಮುಚ್ಚಿಸಿಕೊಳ್ಳುವುದೇ,
“ಚಟ ಆನ್ನೋ ಎರಡಕ್ಷರದ ಮಹಿಮೆ ......!

No comments:

Post a Comment